Advertisement

ಪೊಲೀಸ್‌ ಅಧಿಕಾರಿ ಬ್ಯಾಂಕ್ ಖಾತೆಗೆ ಸಂಬಳದೊಂದಿಗೆ 10 ಕೋಟಿ ರೂ. ಕ್ರೆಡಿಟ್‌: ಮುಂದೆನಾಯ್ತು?

05:03 PM Nov 07, 2022 | Team Udayavani |

ಕರಾಚಿ: ನಮ್ಮ ಕಿಸೆಯಲ್ಲಿ ಕೆಲವೊಮ್ಮೆ ನೆನಪಿಲ್ಲದೇ 10,20  ರೂ. ನೋಟುಗಳನ್ನು ಇಟ್ಟಿರುತ್ತೇವೆ. ಅದು ಒಂದು ದಿನ ಅಚಾನಕ್ಕಾಗಿ ನಮಗೆ ಸಿಕ್ಕರೆ ತುಂಬಾ ಖುಷಿಯಾಗುತ್ತದೆ. ಒಮ್ಮೆ ಊಹೆ ಮಾಡಿಕೊಳ್ಳಿ ಒಂದು ವೇಳೆ ಇವತ್ತು ನಿಮ್ಮ ಖಾತೆಗೆ ಎಲ್ಲಿಂದಲೂ 50 ಸಾವಿರ ಕ್ರೆಡಿಟ್‌ ಆದರೆ ಏನಾಗಬಹುದು?

Advertisement

ಇಂಥದ್ದೇ ಒಂದು ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ. ಪೊಲೀಸ್‌ ಅಧಿಕಾರಿ ಅಮೀರ್ ಗೋಪಾಂಗ್  ರಾತ್ರೋ ರಾತ್ರಿ ಕೋಟ್ಯಧಿಪತಿ ಆಗಿದ್ದಾರೆ.!

ಇತ್ತೀಚೆಗೆ ಅಮೀರ್ ಗೋಪಾಂಗ್ ಅವರ ಖಾತೆಗೆ, ಸಂಬಳದೊಂದಿಗೆ 10 ಕೋಟಿ ರೂ. ಹಣ ಕ್ರೆಡಿಟ್‌ ಆಗಿದೆ. ಜೀವನವಿಡೀ ದುಡಿದರೂ ಇಷ್ಟು ಹಣ ಬರುವುದಿಲ್ಲ ಎನ್ನುವ ಯೋಚನೆಯಲ್ಲೇ, ನಾನು ನಿಜಕ್ಕೂ ಶಾಕ್‌ ಗೆ ಒಳಗಾದೆ. ಕಾರಣ ನನ್ನ ಖಾತೆಯಲ್ಲಿ ಇದುವರೆಗೂ ಕೆಲವು ಸಾವಿರ ರೂ. ಬಿಟ್ಟರೆ ಇಷ್ಟು ದೊಡ್ಡ ಮೊತ್ತ ಯಾವತ್ತೂ ನನ್ನ ಬಳಿ ಇರಲಿಲ್ಲ ಅಮೀರ್ ಗೋಪಾಂಗ್ ಎಂದು ಹೇಳುತ್ತಾರೆ.

ಅಮೀರ್ ಗೋಪಾಂಗ್ ಹಣವನ್ನು ತೆಗೆಯುವ ಮುನ್ನ ಬ್ಯಾಂಕ್‌ ಅಧಿಕಾರಿಗಳು ಅವರ ಬ್ಯಾಂಕ್‌ ಖಾತೆ ಹಾಗೂ ಎಟಿಎಂನ್ನು ಬ್ಲಾಕ್‌ ಮಾಡಿದ್ದಾರೆ. ಪೊಲೀಸರು ಇಷ್ಟು ದೊಡ್ಡ ಮೊತ್ತ ಹೇಗೆ ಬಂತೆಂದು ತನಿಖೆಯನ್ನು ಆರಂಭಿಸಿದ್ದಾರೆ. ಈ ಹಿಂದೆ ಪಾಕಿಸ್ತಾನದ ಲರ್ಕಾನಾ ಮತ್ತು ಸುಕ್ಕೂರ್ ನಲ್ಲಿ ಕೆಲ ಪೊಲೀಸ್‌ ಅಧಿಕಾರಿಗಳ ಖಾತೆಗೆ ಇಂಥ ದೊಡ್ಡ ಮೊತ್ತದ ಹಣ ಕ್ರೆಡಿಟ್‌ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next