ಇಸ್ಲಾಮಾಬಾದ್ : ಅತ್ಯಂತ ಆಘಾತಕಾರಿ ವಿದ್ಯಮಾನವೊಂದರಲ್ಲಿ ಹಿರಿಯ ಪಾಕಿಸ್ಥಾನೀ ಪ್ರಾಸಿಕ್ಯೂಟರ್ ಒಬ್ಬರು ಕ್ರೈಸ್ತ ಸಮುದಾಯದ 42 ಕೊಲೆ ಆರೋಪಿಗಳಿಗೆ, “ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಿ, ಕೊಲೆ ಆರೋಪದಿಂದ ಖುಲಾಸೆಗೊಳ್ಳಿ, ಶಿಕ್ಷೆಯನ್ನು ತಪ್ಪಿಸಿಕೊಳ್ಳಿ’ ಎಂದು ಹೇಳಿರುವುದಾಗಿ ವರದಿಯಾಗಿದೆ.
2015ರ ಮಾರ್ಚ್ 15ರಂದು ಲಾಹೋರ್‌ನಲ್ಲಿ ಕ್ರೈಸ್ತ ಸಮುದಾಯದವರು ನೆಲೆಸಿಕೊಂಡಿರುವ ಯೋಹಾನಾಬಾದ್‌ನಲ್ಲಿನ ಎರಡು ಚರ್ಚುಗಳನ್ನು ಗುರಿ ಇರಿಸಿ ಭಾನುವಾರದ ಪ್ರಾರ್ಥನಾ ಸಭೆಯ ವೇಳೆ ಆತ್ಮಾಹುತಿ ಬಾಂಬ್ ದಾಳಿ ನಡೆದಿತ್ತು. ಅದನ್ನು ಅನುಸರಿಸಿ ಇಬ್ಬರು ಮುಸ್ಲಿಮರನ್ನು ಹೊಡೆದು ಸಾಯಿಸಿರುವುದಾಗಿ 42 ಮಂದಿ ಕ್ರೈಸ್ತರ ಮೇಲೆ ಆರೋಪ ಹೊರಿಸಲಾಗಿತ್ತು.
ಕೊಲೆ ಕೃತ್ಯಕ್ಕಾಗಿ ಶಿಕ್ಷೆಗೆ ಗುರಿಯಾಗುವುದನ್ನು ತಪ್ಪಿಸಲು ಆರೋಪಿಗಳಿಗೆ ಕ್ರೈಸ್ತ ಮತವನ್ನು ತೊರೆದು ಇಸ್ಲಾಂ ಮತಕ್ಕೆ ಸೇರುವಂತೆ ಜಿಲ್ಲಾ ಉಪ ಪಬ್ಲಿಕ್ ಪ್ರಾಸಿಕ್ಯೂಟರ್ (ಡಿಡಿಪಿಪಿ) ಸೈಯದ್ ಅನೀಸ್ ಶಾ ಆಫರ್ ಕೊಟ್ಟಿದ್ದರು ಎಂದು ಆರೋಪಿಗಳಿಗೆ ಕಾನೂನು ನೆರವು ನೀಡುತ್ತಿದ್ದ ಬಲಪಂಥೀಯ ಕಾರ್ಯಕರ್ತ ಜೋಸೆಫ್ ಫ್ರಾನ್ಸಿ ಹೇಳಿರುವುದನ್ನು “ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.
“ನೀವು ಇಸ್ಲಾಂ ಮತಕ್ಕೆ ಸೇರಿದಲ್ಲಿ ನಿಮ್ಮನ್ನು ಕೊಲೆ ಆರೋಪದಿಂದ ಖುಲಾಸೆಗೊಳಿಸಲಾಗುವುದು, ಶಿಕ್ಷೆಯಿಂದಲೂ ನೀವು ಮುಕ್ತರಾಗಬಹುದು’ ಎಂದು ಡಿಡಿಪಿಪಿ ಸೈಯದ್ ಅನೀಸ್ ಆರೋಪಿಗಳಿಗೆ ಭರವಸೆ ನೀಡಿದ್ದರು ಎಂದು ಜೋಸೆಫ್ ಫ್ರಾನ್ಸಿ ಹೇಳಿದರು.
ಈ ಬಗ್ಗೆ ಡಿಡಿಪಿಪಿ ಶಾ ಅವರನ್ನು ಮಾಧ್ಯಮದವರು ಸಂಪರ್ಕಿಸಿದಾಗ, “ನಾನು ಆರೋಪಿಗಳಿಗೆ ಇಸ್ಲಾಂ ಧರ್ಮವನ್ನು ಸೇರುವಂತೆ ಕೇಳಿಲ್ಲ; ಬದಲು ಅವರ ಮುಂದೆ ಕೇವಲ ಆಯ್ಕೆಯನ್ನಷ್ಟೇ ಇಟ್ಟಿದ್ದೆ’ ಎಂದು ಹೇಳಿದರು.
ಇಸ್ಲಾಂ ಧರ್ಮವನ್ನು ಸೇರುವಂತೆ ನೀವು ಆರೋಪಿಗಳನ್ನು ಕೇಳಿಕೊಂಡಾಗಿನ ವಿಡಿಯೋ ಚಿತ್ರಿಕೆಯೊಂದು ಆರೋಪಿಗಳ ಬಳಿ ಇದೆ ಎಂದು ಹೇಳಿದಾಗ ಶಾ ನುಣುಚಿಕೊಂಡರು. 42 ಕ್ರೈಸ್ತ ಕೊಲೆ