Advertisement

ODI Cricket: ವಿರಾಟ್ ಕೊಹ್ಲಿ, ಶಿಖರ್ ಧವನ್ ದಾಖಲೆ ಮುರಿದ ಪಾಕ್ ನಾಯಕ ಬಾಬರ್ ಅಜಂ

02:13 PM Aug 25, 2023 | Team Udayavani |

ಹಂಬಂತೋಟಾ: ಪಾಕಿಸ್ತಾನ ಕ್ರಿಕೆಟ್ ತಂಡವು ಸದ್ಯ ಶ್ರೀಲಂಕಾದಲ್ಲಿ ಅಫ್ಘಾನಿಸ್ತಾನ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ಏಷ್ಯಾಕಪ್ ತಯಾರಿಯಲ್ಲಿರುವ ಪಾಕಿಸ್ತಾನ ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಇದೇ ವೇಳೆ ಪಾಕ್ ನಾಯಕ ಬಾಬರ್ ಅಜಂ ಅವರು ದಾಖಲೆಯೊಂದನ್ನು ಮುರಿದಿದ್ದಾರೆ.

Advertisement

ಗುರುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಬಾಬರ್ ಅಜಂ 53 ರನ್ ಗಳಿಸಿದರು. ಈ ವೇಳೆ 100 ಏಕದಿನ ಇನ್ನಿಂಗ್ಸ್‌ ಗಳ ನಂತರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ ಎಂಬ ದಾಖಲೆಯನ್ನು ನಿರ್ಮಿಸಿದರು. ಬಾಬರ್ ಅಜಂ ನೂರು ಇನ್ನಿಂಗ್ಸ್ ಗಳ ಬಳಿಕ 18 ಶತಕಗಳೊಂದಿಗೆ 58.49 ಸರಾಸರಿಯಲ್ಲಿ 5,089 ರನ್ ಗಳಿಸಿದ್ದಾರೆ.

ಈ ಹಿಂದೆ ಈ ದಾಖಲೆ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹಾಶಿಂ ಆಮ್ಲ ಹೆಸರಲ್ಲಿತ್ತು. ಅವರು ಮೊದಲ ನೂರು ಏಕದಿನ ಇನ್ನಿಂಗ್ಸ್ ನಲ್ಲಿ 17 ಶತಕಗಳೊಂದಿಗೆ 53.18 ಸರಾಸರಿಯಲ್ಲಿ 4,946 ರನ್‌ ಗಳನ್ನು ಪೇರಿಸಿದ್ದರು.

ವೆಸ್ಟ್ ಇಂಡೀಸ್ ಏಕದಿನ ನಾಯಕ ಶಾಯ್ ಹೋಪ್ ತಮ್ಮ ಮೊದಲ ನೂರು ಏಕದಿನ ಪಂದ್ಯಗಳಲ್ಲಿ 50.4 ಸರಾಸರಿಯಲ್ಲಿ 14 ಶತಕಗಳೊಂದಿಗೆ 4,436 ರನ್ ಗಳಿಸಿದ್ದರು.

ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ಅವರು ನಾಲ್ಕನೇ ಸ್ಥಾನದಲ್ಲಿದ್ದು, ಅವರು ಮೊದಲ ನೂರು ಪಂದ್ಯಗಳ ಬಳಿಕ 11 ಶತಕಗಳೊಂದಿಗೆ 4428 ರನ್ ಗಳಿಸಿದ್ದರು.

Advertisement

ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ 13 ಶತಕಗಳೊಂದಿಗೆ 46.2 ಸರಾಸರಿಯಲ್ಲಿ 4,343 ರನ್‌ ಗಳೊಂದಿಗೆ ಏಕದಿನ ಕ್ರಿಕೆಟ್‌ ನಲ್ಲಿ ತಮ್ಮ ಮೊದಲ 100 ಪಂದ್ಯಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.

ಭಾರತದ ಮಾಜಿ ನಾಯಕ, ರನ್ ಮಶಿನ್ ವಿರಾಟ್ ಕೊಹ್ಲಿ ಅವರು ಈ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಅವರು ಮೊದಲ ನೂರು ಪಂದ್ಯಗಳ ಬಳಿಕ 13 ಶತಕಗಳೊಂದಿಗೆ 49.76ರ ಸರಾಸರಿಯಲ್ಲಿ 4230 ರನ್ ಗಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next