Advertisement

ಚೀನಾ ನೆರವು,ಸಿಂಧೂ ನದಿ ಬಳಿ ಪಾಕ್ ನಿಂದ 6ಅಣೆಕಟ್ಟು ನಿರ್ಮಾಣ: ಕೇಂದ್ರ

02:47 PM Aug 04, 2017 | Sharanya Alva |

ನವದೆಹಲಿ: ಪಾಕಿಸ್ತಾನ ಚೀನಾ ದೇಶದ ನೆರವಿನೊಂದಿಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಸಿಂಧೂ ನದಿ ಸಮೀಪ ಆರು ಅಣೆಕಟ್ಟುಗಳನ್ನು ನಿರ್ಮಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ಸಂಸತ್ ಗೆ ಮಾಹಿತಿ ನೀಡಿದೆ.

Advertisement

ಈ ಅಣೆಕಟ್ಟು ಯೋಜನೆಗಾಗಿ ಪಾಕಿಸ್ತಾನಕ್ಕೆ ನೆರವು ನೀಡುವುದಾಗಿ ಚೀನಾ ಈಗಾಗಲೇ ಭರವಸೆ ನೀಡಿತ್ತು, ಆ ಹಿನ್ನೆಲೆಯಲ್ಲಿ ಚೀನಾದ ಸಹಾಯದೊಂದಿಗೆ ಅಣೆಕಟ್ಟು ಕಟ್ಟುತ್ತಿರುವುದಾಗಿ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ, ನಿವೃತ್ತ ಜನರಲ್ ವಿಕೆ ಸಿಂಗ್ ತಿಳಿಸಿದರು.

ಪಾಕಿಸ್ತಾನ ಈಗಾಗಲೇ ಅಕ್ರಮವಾಗಿ ಕಾಶ್ಮೀರದ ಕೆಲವು ಭಾಗಗಳನ್ನು ಅತಿಕ್ರಮಿಸಿಕೊಂಡಿದೆ ಎಂದು ಹೇಳಿರುವ ಸಿಂಗ್, ಹಾಗಾಗಿ ಪಾಕ್ ಅಲ್ಲಿ ನಡೆಸುತ್ತಿರುವ ಚಟುವಟಿಕೆ ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಅಖಂಡತೆಯ ಉಲ್ಲಂಘನೆಯಾಗಿದೆ ಎಂದು ವಿವರಿಸಿದರು.

ಕಾನೂನು ಬಾಹಿರವಾಗಿ ಪಾಕಿಸ್ತಾನ ವಶಪಡಿಸಿಕೊಂಡಿರುವ ಪ್ರದೇಶಗಳಲ್ಲಿ ಭಾರತ ಸಮರ್ಪಕವಾದ ನಿಲುವನ್ನು ಮತ್ತು ಪ್ರತಿರೋಧವನ್ನು ವ್ಯಕ್ತಪಡಿಸುತ್ತಾ ಬಂದಿದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರ ಕೂಡಾ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಹೊಂದಿಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next