Advertisement

ಪಾಕ್‌ ಮಗುವಿಗೆ ಭಾರತದಲ್ಲಿ ಹೃದಯ ಚಿಕಿತ್ಸೆ : ಸುಶ್ಮಾಗೆ ಕೃತಜ್ಞತೆ

04:51 PM Jul 18, 2017 | Team Udayavani |

ಹೊಸದಿಲ್ಲಿ : ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್‌ ನೀಡಿದ್ದ ಭರವಸೆಯ ಪ್ರಕಾರ ಪಾಕಿಸ್ಥಾನದ ನಾಲ್ಕು ತಿಂಗಳ ಮಗು ರೋಹಾನ್‌ ಗೆ ನೋಯ್ಡಾ ಆಸ್ಪತ್ರೆಯಲ್ಲಿ ಯಶಸ್ವೀ ಹೃದಯ ಶಸ್ತ್ರಚಿಕಿತ್ಸೆ ನಡೆದಿದೆ.

Advertisement

ರೋಹಾನ್‌ನ ತಂದೆ ಕಮಾಲ್‌ ಸಿದ್ದಿಕಿ ಅವರು ”ಸುಶ್ಮಾ ಸ್ವರಾಜ್‌ ತೋರಿರುವ ಮಾನವೀಯತೆಗೆ ನನ್ನ ಹೃದಯಮಿಡಿಯುತ್ತಿದೆ” ಎಂದಿದ್ದಾರಲ್ಲದೆ ಇತರ ಪಾಕಿಸ್ಥಾನೀಯರಿಗೂ ಭಾರತ ವೈದ್ಯಕೀಯ ವೀಸಾ ದ್ವಾರವನ್ನು ತೆರೆಯಬೇಕೆಂದು ಕೋರಿದ್ದಾರೆ. 

ಪಾಕಿಸ್ಥಾನದ ನಾಲ್ಕು ತಿಂಗಳ ಮಗು ರೋಹಾನ್‌ ನನ್ನು ಜುಲೈ 12ರಂದು ನೋಯ್ಡಾದ ಜೇಪೀ ಆಸ್ಪತ್ರೆಗೆ ಹೃದಯ ಶಸ್ತ್ರಚಿಕಿತ್ಸೆಗಾಗಿ ಕರೆತರಲಾಗಿತ್ತು. ಡಾ. ರಾಜೇಶ್‌ ಶರ್ಮಾ ನೇತೃತ್ವದ ವೈದ್ಯರ ತಂಡದಿಂದ  ಜು.14ರಂದು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.  

ರೋಹಾನ್‌ಗೆ ಹೃದಯದಲ್ಲಿ ಒಂದು ತೂತು ಇತ್ತು. ಹಾಗಾಗಿ ಹೃದಯದ ಎಡಭಾಗದಲ್ಲಿರುವ ಅಯೋರ್ಟಾ ಬಲಭಾಗಕ್ಕೆ ಬರುತ್ತಿತ್ತು. ಹಾಗಾಗಿ ರೋಹಾನಾಗೆ ಉಸಿರಾಟದ ತೊಂದರೆ ಇತ್ತು ಮತ್ತು ನ್ಯೂಮೋನಿಯಾ ಕೂಡ ಬಾಧಿಸುತ್ತಿತ್ತು ಎಂದು ವೈದ್ಯರು ಹೇಳಿದ್ದು ಶಸ್ತ್ರ ಚಿಕಿತ್ಸೆಯ ಬಳಿಕ ರೋಹಾನಾ ಚೇತರಿಸಿಕೊಳ್ಳುತ್ತಿದ್ದಾನೆ ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next