Advertisement
ಕೊಲಂಬೊ: ಎಡಗೈ ಆಫ್ಸ್ಪಿನ್ನರ್ ಏಕ್ತಾ ಬಿಷ್ಟ್ ದಾಳಿಗೆ ಬೆಚ್ಚಿಬಿದ್ದ ಪಾಕಿಸ್ಥಾನ ರವಿವಾರದ “ಐಸಿಸಿ ವನಿತಾ ವಿಶ್ವಕಪ್ ಅರ್ಹತಾ ಪಂದ್ಯಾವಳಿ’ಯ ಕೊನೆಯ “ಸೂಪರ್ ಸಿಕ್ಸ್’ ಪಂದ್ಯದಲ್ಲಿ ಭಾರತಕ್ಕೆ 7 ವಿಕೆಟ್‌ಗಳಿಂದ ಶರಣಾಗಿದೆ. ಇದರೊಂದಿಗೆ ಮಿಥಾಲಿ ರಾಜ್ ಪಡೆ ತನ್ನ ಫೈನಲ್ ಸ್ಥಾನಕ್ಕೆ ಅಜೇಯ ಸ್ಪರ್ಶವಿತ್ತಿದೆ.
Related Articles
ಕೊಲಂಬೋದಲ್ಲಿ ನಡೆದ ಕೊನೆಯ ಸೂಪರ್ ಸಿಕ್ಸ್ ಪಂದ್ಯದಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಪಾಕಿಸ್ಥಾನ 43.4 ಓವರ್‌ಗಳಲ್ಲಿ ಕೇವಲ 67 ರನ್ನಿಗೆ ಆಲೌಟ್ ಆಯಿತು. ಏಕ್ತಾ ಬಿಷ್ಟ್ 10 ಓವರ್‌ಗಳ ಪೂರ್ತಿ ಕೋಟಾದಲ್ಲಿ 7 ಮೇಡನ್ ಮಾಡಿ ಬರೀ 8 ರನ್ ನೀಡಿ 5 ವಿಕೆಟ್ ಉಡಾಯಿಸಿದರು. ಇದು ಏಕ್ತಾ ಅವರ ಜೀವನಶ್ರೇಷ್ಠ ಬೌಲಿಂಗ್ ಆಗಿದ್ದು, ಅವರು ಏಕದಿನದಲ್ಲಿ ಮೊದಲ ಸಲ 5 ವಿಕೆಟ್ ಕಿತ್ತ ಸಾಧನೆಗೈದರು. ಉಳಿದಂತೆ ಶಿಖಾ ಪಾಂಡೆ 9ಕ್ಕೆ 2 ವಿಕೆಟ್ ಪಡೆದರೆ, ದೀಪ್ತಿ ಶರ್ಮ, ದೇವಿಕಾ ವೈದ್ಯ ಮತ್ತು ಹರ್ಮನ್‌ಪ್ರೀತ್ ಕೌರ್ ಒಂದೊಂದು ವಿಕೆಟ್ ಉರುಳಿಸಿದರು.
Advertisement
ಜವಾಬಿತ್ತ ಭಾರತ 22.3 ಓವರ್‌ಗಳಲ್ಲಿ 3 ವಿಕೆಟಿಗೆ 70 ರನ್ ಬಾರಿಸಿ ಈ ಕೂಟದ ಸತತ 7ನೇ ಗೆಲುವು ದಾಖಲಿಸಿತು. ಈ ಸ್ಪರ್ಧೆಯಲ್ಲಿ ಪಾಕಿಸ್ಥಾನ ಇನ್ನೂ ಸಣ್ಣ ಮೊತ್ತಕ್ಕೆ ಕುಸಿಯುವ ಸಾಧ್ಯತೆ ಇತ್ತು. ಕಾರಣ, ಪಾಕ್ ಸ್ಕೋರ್‌ಬೋರ್ಡ್‌ನಲ್ಲಿ ಎಕ್ಸ್‌ಟ್ರಾ ರನ್ನಿ ನದೇ ದೊಡ್ಡ ಮೊತ್ತವಾಗಿತ್ತು. ಈ 67ರಲ್ಲಿ 24 ರನ್ ಎಕ್ಸ್‌ಟ್ರಾ ರೂಪದಲ್ಲಿ ಬಂದಿತ್ತು (6 ಬೈ, 5 ಲೆಗ್ ಬೈ, 13 ವೈಡ್). ಎರಡಂಕೆಯ ಮೊತ್ತ ದಾಖಲಿಸಿದ್ದು ಇಬ್ಬರು ಮಾತ್ರ, ಆರಂಭಿಕ ಆಟಗಾರ್ತಿ ಆಯೇಷಾ ಜಾಫರ್ (19) ಮತ್ತು ಅನುಭವಿ ಬಿಸ್ಮಾ ಮರೂಫ್ (13). ರನ್ ಚೇಸಿಂಗ್ ವೇಳೆ ಭಾರತ ಮೋನಾ ಮೆಶ್ರಮ್ (9), ದೇವಿಕಾ ವೈದ್ಯ (3) ಹಾಗೂ ಹರ್ಮನ್‌ಪ್ರೀತ್ ಕೌರ್ (24) ವಿಕೆಟ್ ಕಳೆದುಕೊಂಡಿತು. ದೀಪ್ತಿ ಶರ್ಮ 29 ರನ್ ಮಾಡಿ ಅಜೇಯರಾಗಿ ಉಳಿದರು. ವೇದಾ ಕೃಷ್ಣಮೂರ್ತಿ (ಔಟಾಗದೆ 4) ಗೆಲುವಿನ ಬೌಂಡರಿ ಹೊಡೆದರು. ಸಂಕ್ಷಿಪ್ತ ಸ್ಕೋರ್
ಪಾಕಿಸ್ಥಾನ-43.4 ಓವರ್‌ಗಳಲ್ಲಿ 67 (ಆಯೇಷಾ 19, ಬಿಸ್ಮಾ 13, ಬಿಷ್ಟ್ 8ಕ್ಕೆ 5, ಶಿಖಾ 9ಕ್ಕೆ 2). ಭಾರತ-22.3 ಓವರ್‌ಗಳಲ್ಲಿ 3 ವಿಕೆಟಿಗೆ 70 (ದೀಪ್ತಿ ಔಟಾಗದೆ 29, ಕೌರ್ 24, ಸದಿಯಾ 19ಕ್ಕೆ 2).