Advertisement

Pakistan ಬೌಲಿಂಗ್‌ ಕೋಚ್‌ ಮಾರ್ನೆ ಮಾರ್ಕೆಲ್‌ ರಾಜೀನಾಮೆ

11:01 PM Nov 13, 2023 | Team Udayavani |

ಲಾಹೋರ್‌: ಪಾಕಿಸ್ಥಾನದ ಬೌಲಿಂಗ್‌ ಕೋಚ್‌ ಹುದ್ದೆಗೆ ಮಾರ್ನೆ ಮಾರ್ಕೆಲ್‌ ರಾಜೀನಾಮೆ ನೀಡಿದ್ದಾರೆ. ಪಾಕ್‌ ತಂಡ ನಾಕೌಟ್‌ ತಲುಪದೆಯೇ ವಿಶ್ವಕಪ್‌ನಿಂದ ಹೊರಬಿದ್ದ ಎರಡೇ ದಿನಗಳಲ್ಲಿ ಮಾರ್ಕೆಲ್‌ ಈ ನಿರ್ಧಾರಕ್ಕೆ ಬಂದರು. ಅವರ ಒಡಂಬಡಿಕೆ ಕೂಡ ಪೂರ್ತಿಗೊಂಡಿಲ್ಲ.

Advertisement

ದಕ್ಷಿಣ ಆಫ್ರಿಕಾದ ಮಾಜಿ ವೇಗಿಯಾ ಗಿರುವ ಮಾರ್ನೆ ಮಾರ್ಕೆಲ್‌ ಕಳೆದ ಜೂನ್‌ನಲ್ಲಿ ಪಾಕಿಸ್ಥಾನ ಬೌಲಿಂಗ್‌ ಕೋಚ್‌ ಆಗಿ ನೇಮಕಗೊಂಡಿದ್ದರು. ಇದು 6 ತಿಂಗಳ ಒಡಂಬಡಿಕೆ ಆಗಿತ್ತು. ಆಗಷ್ಟೇ ಅವರು ಐಪಿಎಲ್‌ನಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಒಪ್ಪಂದವನ್ನು ಮುಗಿಸಿದ್ದರು.

“ಶೀಘ್ರದಲ್ಲೇ ಬದಲಿ ಬೌಲಿಂಗ್‌ ತರಬೇತುದಾರನನ್ನು ನೇಮಿಸಲಾಗು ವುದು. ಪಾಕಿಸ್ಥಾನ ತಂಡ ವರ್ಷಾಂತ್ಯ ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳಲಿದ್ದು, ಅಷ್ಟರಲ್ಲಿ ಮಾರ್ಕೆಲ್‌ ಸ್ಥಾನವನ್ನು ತುಂಬಲಾಗುವುದು’ ಎಂದು ಪಿಸಿಬಿ ಪ್ರಕಟನೆಯಲ್ಲಿ ತಿಳಿಸಿದೆ.

ಪಾಕಿಸ್ಥಾನದ ಮಾಜಿ ವೇಗಿ ಉಮರ್‌ ಗುಲ್‌ ಅವರನ್ನು ಮಧ್ಯಂತರ ಅವಧಿಗೆ ಬೌಲಿಂಗ್‌ ಕೋಚ್‌ ಆಗಿ ನೇಮಿಸುವ ಸಾಧ್ಯತೆ ಇದೆ. ಅವರು ಹಿಂದೊಮ್ಮೆ ಈ ಹುದ್ದೆ ನಿಭಾಯಿಸಿದ್ದರು. ಅನಂತರ ಅಫ್ಘಾನಿಸ್ಥಾನ ತಂಡದ ಕೋಚ್‌ ಆಗಿಯೂ ಕರ್ತವ್ಯ ನಿಭಾಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next