Advertisement

ಪಾಕಿಸ್ಥಾನಕ್ಕೆ ಟಿ20 ಸರಣಿ

07:00 AM Apr 04, 2018 | Team Udayavani |

ಕರಾಚಿ: ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ ಪಾಕಿಸ್ಥಾನ ತಂಡವು ಸರಣಿ ತನ್ನದಾಗಿಸಿಕೊಂಡಿದೆ. ಸೋಮವಾರ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಪಾಕಿಸ್ಥಾನ ತಂಡವು ಬಾಬರ್‌ ಅಜಂ ಅವರ ಅಮೋಘ ಆಟದಿಂದಾಗಿ 82 ರನ್ನುಗಳಿಂದ ವೆಸ್ಟ್‌ ಇಂಡೀಸ್‌ ತಂಡವನ್ನು ಸೋಲಿಸಿದೆ.

Advertisement

ಬಾಬರ್‌ ಅಜಂ ಮೂರು ರನ್ನಿನಿಂದ ಚೊಚ್ಚಲ ಶತಕ ದಾಖಲಿಸಲು ವಿಫ‌ಲ ರಾದರು. ಕೇವಲ 58 ಎಸೆತಗಳಿಂದ 13 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ ಅವರು 97 ರನ್‌ ಗಳಿಸಿದ್ದರು. ಇದರಿಂ ದಾಗಿ ಪಾಕಿಸ್ಥಾನ 3 ವಿಕೆಟಿಗೆ 205 ರನ್‌ ಪೇರಿಸಿತು. ಇದಕ್ಕುತ್ತರವಾಗಿ ವೆಸ್ಟ್‌ ಇಂಡೀಸ್‌ ತಂಡವು 19.2 ಓವರ್‌ಗಳಲ್ಲಿ 123 ರನ್ನಿಗೆ ಆಲೌಟಾಯಿತು. ಮೊಹಮ್ಮದ್‌ ಆಮಿರ್‌ 22 ರನ್ನಿಗೆ 3 ವಿಕೆಟ್‌ ಕಿತ್ತರು. 

ವೆಸ್ಟ್‌ಇಂಡೀಸ್‌ ಮೊದಲ ಟಿ20 ಪಂದ್ಯ ದಲ್ಲಿ 143 ರನ್ನುಗಳಿಂದ ಸೋತಿತ್ತು. ಇದು ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಎರ ಡನೇ ಬಲುದೊಡ್ಡ ಸೋಲು ಆಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next