Advertisement

ಜಮ್ಮು ಕಾಶ್ಮೀರ: ಉಗ್ರರನ್ನು ನುಸುಳಿಸಲು ಪಾಕ್‌ ಕಮಾಂಡೋ ಸಿದ್ದತೆ

07:11 PM May 09, 2018 | Team Udayavani |

ಹೊಸದಿಲ್ಲಿ : ಜೈಶ್‌ ಎ ಮೊಹಮ್ಮದ್‌ (ಜೆಇಎಂ) ಮತ್ತು ಲಷ್ಕರ್‌ ಎ ತಯ್ಯಬ (ಎಲ್‌ಇಟಿ) ಉಗ್ರರನ್ನು ಪಿಓಕೆ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತದ ಗಡಿಯೊಳಗೆ ನುಸುಳಿಸುವ ಸಿದ್ಧತೆಯನ್ನು ಪಾಕ್‌ ಸೇನಾ ಕಮಾಂಡೋಗಳು ಮಾಡುತ್ತಿರುವುದಾಗಿ ವರದಿಯಾಗಿದೆ.

Advertisement

ಪಾಕ್‌ ಸೇನೆಯ ವಿಶೇಷ ಸೇನಾ ಸಮೂಹ (ಎಸ್‌ಎಸ್‌ಜಿ) ಪಿಓಕೆಯ ರಾಜೋರಿ ಮತ್ತು ಪೂಂಚ್‌ ಪ್ರಾಂತ್ಯಗಳ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಬಾರ್ಡರ್‌ ಆ್ಯಕ್ಷನ್‌ ಟೀಮ್‌ (ಬ್ಯಾಟ್‌) ರಚಿಸಿರುವುದಾಗಿ ವರದಿಯಾಗಿದೆ.

ಬ್ಯಾಟ್‌ ತಂಡದಲ್ಲಿ ಎಸ್‌ಎಸ್‌ಜಿ ಕಮಾಂಡೋಗಳು ಮತ್ತು ಪಾಕ್‌ ತರಬೇತಿ ಪಡೆದಿರುವ ಉಗ್ರರು ಇರುವುದು ಸಾಮಾನ್ಯವಾಗಿದೆ. ಬ್ಯಾಟ್‌ ತಂಡ ಉಗ್ರರನ್ನು ಜಮ್ಮು ಕಾಶ್ಮೀರಕ್ಕೆ ಒಳನುಸುಳಿಸುವುದಕ್ಕೆ ನೆರವಾಗುತ್ತದೆ ಎಂದು ವರದಿಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next