ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಏನಾಯಿತು ಎಂಬುದಕ್ಕೆ ಪಾಕಿಸ್ಥಾನ ಮತ್ತು ಉಗ್ರಗಾಮಿತ್ವ ಕಾರಣವಾಗಿದೆ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಹೇಳಿಕೆ ನೀಡಿದ್ದಾರೆ.
ಜಮ್ಮುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾತ್ಮಾ ಗಾಂಧಿ ಅವರು ಅತ್ಯಂತ ದೊಡ್ಡ ಹಿಂದೂ ಮತ್ತು ಜಾತ್ಯತೀತವಾದಿ ಎಂದು ನಾನು ನಂಬುತ್ತೇನೆ. ಇದು ಎಲ್ಲಾ ಹಿಂದೂಗಳು, ಕಾಶ್ಮೀರಿ ಪಂಡಿತರು, ಕಾಶ್ಮೀರಿ ಮುಸ್ಲಿಮರು, ಡೋಗ್ರಾಗಳ ಮೇಲೆ ಪರಿಣಾಮ ಬೀರಿದೆ ಎಂದರು.
ರಾಜಕೀಯ ಪಕ್ಷಗಳು ಧರ್ಮ, ಜಾತಿ ಮತ್ತು ಇತರ ವಿಷಯಗಳ ಆಧಾರದ ಮೇಲೆ 24×7 ವಿಭಜನೆಯನ್ನು ಮಾಡಬಹುದು. ಅಂತಹ ಕೆಲಸ ಮಾಡುವ ನನ್ನ ಸಹಿತ ಯಾವುದೇ ಪಕ್ಷವನ್ನು ನಾನು ಕ್ಷಮಿಸುವುದಿಲ್ಲ. ನಾಗರಿಕ ಸಮಾಜ ಒಟ್ಟಾಗಿ ಇರಬೇಕು. ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರಿಗೂ ನ್ಯಾಯ ನೀಡಬೇಕು ಎಂದರು.
ಇತ್ತೀಚೆಗೆ ಬಿಡುಗಡೆಯಾಗಿರುವ ಬಾಲಿವುಡ್ ಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ಕುರಿತು ನಡೆಯುತ್ತಿರುವ ವಿವಾದ , ಮತ್ತು ಭಾರಿ ಚರ್ಚೆಗಳ ಮಧ್ಯೆ ಈ ಹೇಳಿಕೆಗಳನ್ನು ಅಜಾದ್ ನೀಡಿದ್ದಾರೆ.