ಬರ್ಮಿಂಗ್ ಹ್ಯಾಮ್: ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯವನ್ನು ನಿರಾಯಾಸವಾಗಿ ಗೆದ್ದು ವಿಶ್ವಕಪ್ ಕೂಟದಲ್ಲಿ ತನ್ನ ಅಜೇಯ ಓಟ ಮುಂದುವರಿಸಿರುವ ವಿರಾಟ್ ಬಳಗ ತನ್ನ ಮುಂದಿನ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯವನ್ನು ಗೆದ್ದರೆ ಭಾರತ ಅಧಿಕೃತವಾಗಿ ಸೆಮಿ ಫೈನಲ್ ಗೆ ಪ್ರವೇಶಿಸಲಿದೆ. ಇಂಗ್ಲೆಂಡ್ ಸೋತರೆ ಕೂಟದಲ್ಲಿ ಮುಂದುವರಿಯಲು ಕಷ್ಟವಿದೆ.
ಅಂದಹಾಗೆ ಈ ಸೆಮಿ ಫೈನಲ್ ಲೆಕ್ಕಾಚಾರದಲ್ಲಿ ತಮಾಷೆಯಾದರೂ ಆಶ್ಚರ್ಯಕರವಾದ ವಿದ್ಯಮಾನವೊಂದು ನಡೆಯುತ್ತಿದೆ. ಪ್ರತೀಬಾರಿಯೂ ಭಾರತ ಸೋಲಬೇಕೆಂದು ಬಯಸುವ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನ ಮತ್ತು ಬಾಂಗ್ಲಾದೇಶ, ಈ ಬಾರಿ ಮಾತ್ರ ಭಾರತ ಜಯಗಳಿಸಬೇಕೆಂದು ಬಯಸುತ್ತಿದೆ. ಯಾಕೆ ಗೊತ್ತಾ? ಮುಂದೆ ಓದಿ.
ಭಾರತ ಮತ್ತು ಇಂಗ್ಲೆಂಡ್ ಪಂದ್ಯ ಉಭಯ ತಂಡಗಳಿಗೆ ಮಾತ್ರವಲ್ಲ ಪಾಕಿಸ್ಥಾನ ಮತ್ತು ಬಾಂಗ್ಲಾದೇಶಕ್ಕೂ ಅತೀ ಮುಖ್ಯ. ಯಾಕೆಂದರೆ ಈ ಪಂದ್ಯದ ಫಲಿತಾಂಶದ ಮೇಲೆ ಈ ಎರಡು ತಂಡಗಳ ವಿಶ್ವಕಪ್ ಭವಿಷ್ಯ ಅಡಗಿದೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಗೆದ್ದರೆ ಪಾಕ್ ಮತ್ತು ಬಾಂಗ್ಲಾಕ್ಕೆ ಮುಂದಿನ ಹಾದಿ ಸುಲಭವಾಗಲಿದೆ. ಒಂದು ವೇಳೆ ಇಂಗ್ಲೆಂಡ್ ಮುಂದೆನೆರಡು ಪಮದ್ಯ ಗೆದ್ದರೆ ಈ ತಂಡಗಳ ವಿಶ್ವಕಪ್ ಹೋರಾಟ ಲೀಗ್ ಹಂತಕ್ಕೆ ಅಂತ್ಯವಾಗುತ್ತದೆ.
Question to all Pakistan fans .. England vs INDIA .. Sunday .. who you supporting ?
— Nasser Hussain (@nassercricket) June 26, 2019 >
ಇಂಗ್ಲೆಂಡ್ ನ ಮಾಜಿ ನಾಯಕ ನಾಸೀರ್ ಹುಸೇನ್ ಈ ಬಗ್ಗೆ ಪಾಕ್ ಅಭಿಮಾನಿಗಳಿಗೆ ಟ್ವೀಟ್ ಮಾಡಿದ್ದು, ಅದರಲ್ಲಿ ನೀವು ಯಾರಿಗೆ ಸಪೋರ್ಟ್ ಮಾಡುತ್ತೀರಿ ಎಂದು ಕೇಳಿದ್ದಾರೆ. ಹುಸೇನ್ ಟ್ವೀಟ್ ಭಾರಿ ವೈರಲ್ ಆಗಿದ್ದು ಭಾರಿ ಸಂಖ್ಯೆಯಲ್ಲಿ ಪಾಕ್ ಅಭಿಮಾನಿಗಳು ರೀ ಟ್ವೀಟ್ ಮಾಡಿದ್ದಾರೆ. ರಾನಾ ಶಾಜೀದ್ ಎಂಬವರೊಬ್ಬರು ಟ್ವೀಟ್ ಮಾಡಿದ್ದು, ಖಂಡಿತವಾಗಿಯೂ ಭಾರತಕ್ಕೆ ನಮ್ಮ ಬೆಂಬಲ. ಯಾಕೆಂದರೆ ಅವರು ನಮ್ಮ ಪಕ್ಕದ ರಾಷ್ಟ್ರದವರು. ಮತ್ತು ಕ್ರಿಕೆಟ್ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದಾರೆ ಎಂದಿದ್ದಾರೆ.
Related Articles
ಭಾರತ ನಮ್ಮ ನೆರೆದೇಶ. ನಾವು ಜಾಸ್ತಿ ಮಾತಾಡುವುದಿಲ್ಲ. ಆದರೂ ಪರಸ್ಪರ ಪ್ರೀತಿ ಇದೆ ಎಂದು ಒಬ್ಬರು ಟ್ವೀಟ್ ಮಾಡಿದರೆ, ನಾವು ಇಂಗ್ಲೆಂಡ್ ನ ಸೋಲನ್ನು ಬಯಸುತ್ತೇವೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಒಟ್ಟಾರೆಯಾಗಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಈ ಪಂದ್ಯ ಮಾತ್ರ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸುತ್ತಿದೆ.