Advertisement
ಇಲ್ಲಿನ ಹಿಂದೂ ಸಮುದಾಯದ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಲಾಗಿದ್ದು, ಶಾವಾಲಾ ತೇಜ್ ಸಿಂಗ್ ದೇವಾಲಯವನ್ನು ಇತ್ತೀಚೆಗೆ ಮತ್ತೆ ತೆರೆದಿದ್ದು, ಹಿಂದೂ ಸಂಪ್ರದಾಯದಂತೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಸಾರ್ವಜನಿಕರ ಭೇಟಿಗೆ ಮುಕ್ತ ಅವಕಾಶ ಕಲ್ಪಿಸಿಕೊಟ್ಟಿರುವುದಾಗಿ ದ ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
Related Articles
Advertisement
ದೇವಾಲಯದ ಜೀರ್ಣೋದ್ಧಾರದ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು. ಇಲ್ಲಿನ ಹಿಂದೂ ದೇವರ ಮೂರ್ತಿಯನ್ನು ಭಾರತದಿಂದ ತರಲಾಗಿತ್ತು ಎಂದು ಅಬ್ಬಾಸ್ ಮಾಹಿತಿ ನೀಡಿದ್ದಾರೆ. ಭಾರತ, ಪಾಕಿಸ್ತಾನ ಇಬ್ಬಾಗವಾದ ನಂತರ ಈ ದೇವಾಲಯ ಬಂದ್ ಆಗಿದ್ದು, ಇದೀಗ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನಿರ್ದೇಶನದ ಮೇರೆಗೆ ದೇವಾಲಯವನ್ನು ಮತ್ತೆ ತೆರೆಯಲಾಗಿದೆ ಎಂದು ಅಬ್ಬಾಸ್ ತಿಳಿಸಿದ್ದಾರೆ.