Advertisement

Pakistan; ಒಸಾಮಾ ಬಿನ್‌ಲಾಡೆನ್‌ ಆಪ್ತ ಅಮೀನ್‌ ಉಲ್‌ ಹಖ್‌ ಸೆರೆ

12:24 AM Jul 20, 2024 | Team Udayavani |

ಇಸ್ಲಾಮಾಬಾದ್‌: ಭಯೋತ್ಪಾದಕ ಒಸಾಮಾ ಬಿನ್‌ ಲಾಡೆನ್‌ನ ಆಪ್ತ ಎನಿಸಿಕೊಂಡ ಅಲ್‌-ಕಾಯಿದಾ ನಾಯಕ ಅಮೀನ್‌ ಉಲ್‌ ಹಖ್‌ನನ್ನು ಪಾಕಿಸ್ಥಾನದ ಭಯೋತ್ಪಾದಕ ನಿಗ್ರಹ ಅಧಿ ಕಾರಿಗಳು ಶುಕ್ರವಾರ ಬಂಧಿಸಿದ್ದಾರೆ. ಪಾಕಿಸ್ಥಾನದ ಪಂಜಾಬ್‌ ಪ್ರಾಂತದಲ್ಲಿ ಹಲವು ಕುಕೃತ್ಯಗಳನ್ನು ಯೋಜಿಸಿದ ಆರೋಪ ದಲ್ಲಿ ಭಯೋತ್ಪಾದನ ನಿಗ್ರಹ ಇಲಾಖೆಯು ಈತನ ವಿರುದ್ಧ ಪ್ರಕರಣ ದಾಖಲಿಸಿತ್ತು. ವಿಶ್ವಸಂಸ್ಥೆಯು ಪಟ್ಟಿ ಮಾಡಿರುವ ಉಗ್ರರಲ್ಲಿ ಈತನೂ ಒಬ್ಬ. ಗುಪ್ತಚರ ಸಂಸ್ಥೆಯ ಸಹಯೋಗ ದೊಂದಿಗೆ ಇಲಾಖೆಯು ಕಾರ್ಯಾಚರಣೆ ನಡೆಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next