Advertisement

ಶಾರದಾ ಪೀಠ ಕಾರಿಡಾರ್‌ಗೆ ಪಾಕಿಸ್ಥಾನ ಸಮ್ಮತಿ

12:44 AM Mar 26, 2019 | Team Udayavani |

ಇಸ್ಲಾಮಾಬಾದ್‌: ಸಿಕ್ಖರ ಪವಿತ್ರ ಸ್ಥಳ ಕರ್ತಾರ್ಪುರಕ್ಕೆ ತೆರಳಲು ಪಾಕಿಸ್ಥಾನ ಪ್ರತ್ಯೇಕ ಕಾರಿಡಾರ್‌ ನಿರ್ಮಾಣಕ್ಕೆ ಒಪ್ಪಿದ ಬೆನ್ನಲ್ಲೇ, ಹಿಂದೂಗಳ ಪವಿತ್ರ ಸ್ಥಳ ಶಾರದಾ ಪೀಠಕ್ಕೆ ತೆರಳಲೂ ಕಾರಿಡಾರ್‌ ನಿರ್ಮಾಣ ಮಾಡಲು ಪಾಕಿಸ್ಥಾನ ಒಪ್ಪಿದೆ ಎಂದು ಹೇಳಲಾಗಿದೆ.

Advertisement

ಈಗಾಗಲೇ ಭಾರತ ಈ ಸಂಬಂಧ ಪ್ರಸ್ತಾವನೆಯನ್ನು ಪಾಕಿಸ್ಥಾನಕ್ಕೆ ಸಲ್ಲಿಸಿತ್ತು. ಪಾಕಿಸ್ಥಾನ ಸರಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪ್ರಧಾನಿಗೆ ವರದಿಯನ್ನು ಸಲ್ಲಿಸಲಿದ್ದಾರೆ ಎಂದು ಪಾಕ್‌ ಮಾಧ್ಯಮಗಳು ವರದಿ ಮಾಡಿವೆ. ಸುಮಾರು 5 ಸಾವಿರ ವರ್ಷಗಳ ಹಿಂದೆ ರಾಜ ಅಶೋಕನ ಕಾಲದಲ್ಲಿ ನಿರ್ಮಾಣವಾಗಿದ್ದ ಈ ಶಾರದಾ ಪೀಠ, ದೇಶ ವಿಭಜನೆಯ ಅನಂತರ ಪಾಕಿಸ್ಥಾನಕ್ಕೆ ಸೇರಿತ್ತು. ಅಂದಿ ನಿಂದಲೂ ಪೀಠ ಹಾಗೂ ಪಾಠಶಾಲೆ ಪಾಳುಬಿದ್ದಿದೆ. 6ನೇ ಶತಮಾನದಿಂದ ಮತ್ತು 12ನೇ ಶತಮಾನದ ವರೆಗೂ ಈ ಪೀಠ ಭಾರತ ಉಪಖಂಡದಲ್ಲಿ ಪ್ರಮುಖ ಅಧ್ಯಯನ ಕೇಂದ್ರಗಳಲ್ಲಿ ಒಂದಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next