Advertisement
ನದೀಂ ಎಸೆದ 92.97 ಮೀ ಜಾವೆಲಿನ್ ಪಾಕಿಸ್ತಾನಕ್ಕೆ 32 ವರ್ಷಗಳ ನಂತರ ಮೊದಲ ಒಲಿಂಪಿಕ್ ಪದಕವನ್ನು ಗೆದ್ದುಕೊಟ್ಟಿತು. ಐತಿಹಾಸಿಕ ಗೆಲುವಿನ ನಂತರ, ನದೀಂಗೆ ಪ್ರಶಸ್ತಿ ಸಮ್ಮಾನಗಳು ಹರಿದು ಬರುತ್ತಿದೆ. ಪಾಕಿಸ್ತಾನದ ಮಂತ್ರಿಗಳು ಮತ್ತು ಗಣ್ಯರು ಈಗಾಗಲೇ ಹಲವಾರು ನಗದು ಬಹುಮಾನಗಳನ್ನು ಘೋಷಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
Related Articles
Advertisement
ಸಿಂಧ್ ನ ಮುಖ್ಯಮಂತ್ರಿಯಿಂದ PKR 50 ಮಿಲಿಯನ್ ಮೊತ್ತ ನದೀಂಗೆ ನೀಡಲಾಗುತ್ತದೆ. ಸಿಂಧ್ ಗವರ್ನರ್ ಕಮ್ರಾನ್ ಟೆಸ್ಸೋರಿ ಅವರು 1 ಮಿಲಿಯನ್ ಪಿಕೆಆರ್ ಘೋಷಿಸಿದ್ದಾರೆ.
ಇದಲ್ಲದೆ ಪಾಕಿಸ್ತಾನದ ಖ್ಯಾತ ಗಾಯಕ ಅಲಿ ಜಫರ್ ಅವರು ಅರ್ಶದ್ ನದೀಂ ಅವರಿಗೆ 1 ಮಿಲಿಯನ್ ಪಿಕೆಆರ್ ನೀಡುವುದಾಗಿ ಘೋಷಿಸಿದ್ದಾರೆ. ಇದೇ ವೇಳೆ ಕ್ರಿಕೆಟರ್ ಅಹಮದ್ ಶೆಹಜಾದ್ ಅವರು ಇಷ್ಟೇ ಮೊತ್ತವನ್ನು ನೀಡುವುದಾಗಿ ಹೇಳಿದ್ದಾರೆ.
ಇದೇ ವೇಳೆ ಅರ್ಶದ್ ನದೀಂ ಅವರಿಗೆ ಪಾಕಿಸ್ತಾನ ಅತ್ಯುನ್ನತ ನಾಗರಿಕ ಪುರಸ್ಕಾರ ನೀಡಲು ಸಂಸತ್ ನಿರ್ಣಯ ಮಾಡಿದೆ ಎಂದು ರೇಡಿಯೊ ಪಾಕಿಸ್ತಾನ ವರದಿ ಮಾಡಿದೆ. ಸೆನೆಟ್‌ನ ಉಪಾಧ್ಯಕ್ಷ ಸೈದಲ್ ಖಾನ್ ನಾಸರ್ ಅವರು ಅರ್ಷದ್ ಪಾಕಿಸ್ತಾನಕ್ಕೆ ಮರಳಿದ ನಂತರ ಗೌರವ ಭೋಜನವನ್ನು ಏರ್ಪಡಿಸುತ್ತಾರೆ ಎಂದು ಹೇಳಿದ್ದಾರೆ.
ಸಿಂಧ್ ಸರ್ಕಾರದ ವಕ್ತಾರ ಮತ್ತು ಸುಕ್ಕೂರ್ ಮೇಯರ್ ಬ್ಯಾರಿಸ್ಟರ್ ಇಸ್ಲಾಂ ಶೇಖ್ ಅವರು ಪಾಕಿಸ್ತಾನಕ್ಕೆ ಆಗಮಿಸಿದ ನಂತರ ನದೀಂ ಅವರಿಗೆ ಚಿನ್ನದ ಕಿರೀಟವನ್ನು ನೀಡಿ ಗೌರವಿಸಲಾಗುವುದು ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಸುಕ್ಕೂರಿನಲ್ಲಿ ಹೊಸ ಕ್ರೀಡಾಂಗಣಕ್ಕೆ ನದೀಂ ಹೆಸರಿಡಲಾಗುವುದು ಎಂದು ಅವರು ಹೇಳಿದರು.