Advertisement

SAARC ಸಭೆಯಲ್ಲಿ ತಾಲಿಬಾನ್ ಭಾಗವಹಿಸುವಂತೆ ಪಾಕ್ ಮನವಿ : ಸಭೆಯೇ ರದ್ದು

10:51 AM Sep 22, 2021 | Team Udayavani |

ನವದೆಹಲಿ : ಇದೇ ಶನಿವಾರ (ಸೆಪ್ಟೆಂಬರ್ 25ರಂದು) ನಿಗದಿಯಾಗಿದ್ದ ಸಾರ್ಕ್(South Asian Association for Regional Cooperation) ವಿದೇಶಾಂಗ ಮಂತ್ರಿಗಳ ಸಭೆ ರದ್ದುಗೊಂಡಿದೆ. ಅಫ್ಘಾನಿಸ್ತಾನ ಸಾರ್ಕ್ ನಲ್ಲಿ ಪ್ರತಿನಿಧಿಸಲು ತಾಲಿಬಾನ್​ಗೆ ಅನುಮತಿ ನೀಡುವಂತೆ ಪಾಕಿಸ್ತಾನ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಸಭೆಯನ್ನೇ ರದ್ದುಗೊಳಿಸಲಾಗಿದೆ ಎಂದು ನೇಪಾಳ ವಿದೇಶಾಂಗ ಸಚಿವಾಲಯ ತಿಳಿಸಿದೆ.

Advertisement

ಮೂಲಗಳ ಪ್ರಕಾರ ಸಾರ್ಕ್ ಸಭೆಯಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ಪ್ರತಿನಿಧಿಸಬೇಕೆಂದು ಕೇಳಿದೆ ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿಸಿವೆ. ಭಾರತ ಸೇರಿದಂತೆ ಇತರ ಕೆಲವು ಸದಸ್ಯ ದೇಶಗಳು ಈ ಪಾಕಿಸ್ತಾನದ ಮನವಿಯನ್ನ ವಿರೋಧಿಸಿವೆ. ಈ ಕಾರಣ ಒಮ್ಮತದ ಕೊರತೆಯಿಂದಾಗಿ ಸಭೆಯನ್ನು ರದ್ದುಗೊಳಿಸಲಾಗಿದೆ.

ಅಮೀರ್ ಖಾನ್ ಮುಟ್ಟಾಕಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ನೇತೃತ್ವದ ಸರ್ಕಾರದ ಹಂಗಾಮಿ ವಿದೇಶಾಂಗ ಸಚಿವರಾಗಿದ್ದಾರೆ. ಮತ್ತೊಂದು ಅಂಶ ಎಂದರೆ ತಾಲಿಬಾನ್ ಸರ್ಕಾರವನ್ನು ಭಾರತವು ಇಲ್ಲಿಯವರೆಗೆ ಒಪ್ಪಿಕೊಂಡಿಲ್ಲ. ಕಾಬೂಲ್‌ ನಲ್ಲಿನ ಹೊಸ ಆಡಳಿತವನ್ನು ಯಾವ ದೇಶವೂ ಒಪ್ಪಿಕೊಂಡಿಲ್ಲ. ಅಲ್ಲದೆ ಕಾಬುಲ್ ಕ್ಯಾಬಿನೆಟ್ ಮಂತ್ರಿಗಳನ್ನು ಯುಎನ್ ಕಪ್ಪುಪಟ್ಟಿಗೆ ಸೇರಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next