ಹೊಸದಿಲ್ಲಿ: ಬಿಜೆಪಿ ಸದಸ್ಯ ಮೇಜರ್ ಸುರೇಂದ್ರ ಪೂನಿಯಾ ಅವರು, ತಮಗೆ
ಪಾಕಿಸ್ಥಾನದಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಆರೋಪಿಸಿದ್ದಾರೆ.
ಅಂತರ್ಜಾಲ ಆಧಾರಿತವಾದ ವಿಒಐಪಿ ಕರೆಗಳ ಮಾದರಿಯ
ಕರೆಗಳಾಗಿದ್ದು ಅತ್ತ ಕಡೆ ಯಿಂದ ಮಾತನಾಡುವ ಅನಾಮಧೇಯ ವ್ಯಕ್ತಿಗಳು, ಪಾಕಿಸ್ಥಾನದ ವಿರುದ್ಧ ನೀವು ಟ್ವೀಟ್ ಮಾಡು ವುದನ್ನು ತಕ್ಷಣವೇ ನಿಲ್ಲಿಸಿ.
ಇಲ್ಲವಾದರೆ, ನಿಮ್ಮ ಅಶ್ಲೀಲ ವೀಡಿಯೋ ಗಳನ್ನು ಅಂತರ್ಜಾಲದಲ್ಲಿ ಹಾಕುತ್ತೇವೆ ಎಂದು ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಲ್ಲದೆ, ನನ್ನ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೂ ಈ ರೀತಿಯ ಕರೆಗಳು ಬರುತ್ತಿವೆ ಎಂದೂ ಹೇಳಿದ್ದಾರೆ.
ಕೇಂದ್ರ ಗೃಹ ಇಲಾಖೆಯು ಹೊಸದಾಗಿ ಆರಂಭಿ ಸಿರುವ ಸೈಬರ್ ದೋಸ್ತ್ ಎಂಬ ಆನ್‌ಲೈನ್ ದೂರು ಸಲ್ಲಿಕೆಯ ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಿರುವುದಾಗಿ ಅವರು ತಿಳಿಸಿದ್ದಾರೆ.