Advertisement

ಪಾಕ್ ನ 7 ಉಗ್ರರು ಉತ್ತರಪ್ರದೇಶಕ್ಕೆ ಪ್ರವೇಶ, ಅಯೋಧ್ಯಾ ಮೇಲೆ ದಾಳಿಗೆ ಸಂಚು; ಗುಪ್ತಚರ ಇಲಾಖೆ

09:20 AM Nov 06, 2019 | Team Udayavani |

ನವದೆಹಲಿ:ಬಹು ನಿರೀಕ್ಷಿತ ಅಯೋಧ್ಯಾ ತೀರ್ಪು ಪ್ರಕಟವಾಗಲು ದಿನಗಣನೆ ಆರಂಭವಾಗಿರುವ ನಡುವೆಯೇ ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಗಳು ಉತ್ತರಪ್ರದೇಶವನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಸಿದ್ಧತೆ ನಡೆಸಿರುವುದಾಗಿ ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ್ದು, ಈ ನಿಟ್ಟಿನಲ್ಲಿ ಉತ್ತರಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

Advertisement

ಇಂಡಿಯಾಟುಡೇ ಟಿವಿಗೆ ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ನೇಪಾಳದ ಮೂಲಕ ಉತ್ತರಪ್ರದೇಶಕ್ಕೆ ಏಳು ಉಗ್ರರು ನುಸುಳಿರುವುದಾಗಿ ತಿಳಿಸಿದೆ. ಇವರೆಲ್ಲರೂ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗೆ ಸೇರಿರುವುದಾಗಿ ಗುಪ್ತಚರ ಮೂಲಗಳ ವರದಿ ವಿವರಿಸಿದೆ.

ಉತ್ತರಪ್ರದೇಶಕ್ಕೆ ನುಸುಳಿರುವ ಏಳು ಉಗ್ರರು ಸದ್ಯ ಗೋರಖ್ ಪುರ್, ಫೈಝಾಬಾದ್ ಮತ್ತು ಅಯೋಧ್ಯಾ ನಗರದಲ್ಲಿ ಅಡಗಿದ್ದಾರೆನ್ನಲಾಗಿದೆ. ಇವರಲ್ಲಿ ಐವರು ಉಗ್ರರನ್ನು ಗುರುತಿಸಲಾಗಿದೆ.

ಮೊಹಮ್ಮದ್ ಯಾಕೂಬ್, ಅಬು ಹಮ್ಜಾ, ಮೊಹಮ್ಮದ್ ಷಾಬಾಝ್, ನಿಸಾರ್ ಅಹ್ಮದ್ ಮತ್ತು ಮೊಹಮ್ಮದ್ ಖ್ವಾಮಿ ಚೌಧರಿ ಎಂದು ಗುರುತಿಸಿರುವುದಾಗಿ ಗುಪ್ತಚರ ಮೂಲಗಳು ಹೇಳಿವೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲ ರೀತಿಯ ಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next