Advertisement

ಪಾಕ್ ಇನ್ನೂ ಮೃತದೇಹಗಳ ಲೆಕ್ಕಹಾಕುತ್ತಿದ್ರೆ, ವಿಪಕ್ಷ ಪುರಾವೆ ಕೇಳುತ್ತಿವೆ! ಮೋದಿ

09:59 AM Mar 30, 2019 | Nagendra Trasi |

ಒಡಿಶಾ(ಕೋರಾಪುಟ್): ಬಾಲಾಕೋಟ್ ನಲ್ಲಿ ಭಾರತದ ವಾಯುಪಡೆ ನಡೆಸಿದ ದಾಳಿಯಿಂದಾಗಿ ಪಾಕಿಸ್ತಾನ ಇನ್ನೂ ಸಾವನ್ನಪ್ಪಿರುವ ಉಗ್ರರ ಶವಗಳ ಲೆಕ್ಕಹಾಕುತ್ತಿದೆ, ಆದರೆ ವಿಪಕ್ಷಗಳು ದಾಳಿ ಬಗ್ಗೆ ಸಾಕ್ಷಿ ಕೇಳುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ.

Advertisement

ಮುಂದಿನ ತಿಂಗಳು ಒಡಿಶಾದಲ್ಲಿ ನಡೆಯಲಿರುವ ವಿಧಾನಸಭಾ ಮತ್ತು ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಶುಕ್ರವಾರ ಮಾತನಾಡಿದ ಅವರು, ಭಾರತದ ವಾಯುಪಡೆ ದಾಳಿ ನಡೆಸಿ ಒಂದು ತಿಂಗಳು ಕಳೆಯುತ್ತಾ ಬಂದಿದ್ದು, ಪಾಕಿಸ್ತಾನ ಇನ್ನೂ ಶವಗಳ(ಉಗ್ರರ) ಲೆಕ್ಕದಲ್ಲಿ ತೊಡಗಿದೆ. ಇಲ್ಲಿರುವ ವ್ಯಕ್ತಿಗಳು(ವಿಪಕ್ಷಗಳು) ಮಾತ್ರ ಸಾಕ್ಷ್ಯ ಕೇಳುತ್ತಿದ್ದಾರೆ ವಾಗ್ದಾಳಿ ನಡೆಸಿದರು.

ಭಾರತ ಉಗ್ರರ ವಿರುದ್ಧ ಸೆಣಸಲು ಶತ್ರುದೇಶದೊಳಕ್ಕೆ ನುಗ್ಗಿ ದಾಳಿ ನಡೆಸಿದ್ದರೆ. ವಿಪಕ್ಷ ನಾಯಕರು ಪುರಾವೆ ಕೇಳುತ್ತಾರೆ. ಅದೇ ರೀತಿ ಮಿಷನ್ ಶಕ್ತಿ ಯಶಸ್ಸಿನ ಬಗ್ಗೆ ಟೆಲಿವಿಷನ್ ನಲ್ಲಿ ಮಾತನಾಡಿರುವ ಬಗ್ಗೆಯೂ ಟೀಕಿಸುತ್ತಿದ್ದಾರೆ ಎಂದರು.

ಎರಡು ದಿನಗಳ ಹಿಂದಷ್ಟೇ ಒಡಿಶಾ ಸೇರಿದಂತೆ ಭಾರತ ಮಾತ್ರವಲ್ಲ ಜಗತ್ತೇ ನಮ್ಮ ಶಕ್ತಿಪ್ರದರ್ಶನಕ್ಕೆ ಸಾಕ್ಷಿಯಾಯಿತು. ಇದೀಗ ಭಾರತ ಬಾಹ್ಯಾಕಾಶದಲ್ಲಿಯೂ ಶಕ್ತಶಾಲಿಯಾಗಿದೆ. ಇದನ್ನು ಇಡೀ ವಿಶ್ವವೇ ಗಮನಿಸಿದೆ. ಅಷ್ಟೇ ಅಲ್ಲ ಭಾರತ ಇನ್ಮುಮದೆ ಬಾಹ್ಯಾಕಾಶದಲ್ಲಿಯೂ ಚೌಕಿದಾರಿ ಕೆಲಸ ಮಾಡಲಿದೆ. ಇದಕ್ಕಾಗಿ ನಾವು ನಮ್ಮ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಬೇಕಾಗಿದೆ ಎಂದು ಮೋದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next