Advertisement

ಪಾಕ್‌ ಗಾಯಕಿಗೆ ನೆಟ್ಟಿಗರ ಕ್ಲಾಸ್‌

09:50 AM Oct 25, 2019 | Hari Prasad |

ಇಸ್ಲಾಮಾಬಾದ್‌: ಇತ್ತೀಚೆಗೆ, ಕೋಣೆಯೊಂದರಲ್ಲಿ ಹಾವುಗಳನ್ನು ಹಿಡಿದುಕೊಂಡು ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ್ದ ಪಾಕಿಸ್ಥಾನದ ಗಾಯಕಿ ರಬಿ ಪಿರ್ಜಾದಾ, ಅಂತರ್ಜಾಲದಲ್ಲಿ ಹೊಸ ವೀಡಿಯೋವೊಂದನ್ನು ಹರಿಬಿಟ್ಟಿದ್ದು, ಈ ಬಾರಿ, ಆತ್ಮಾಹುತಿ ಬಾಂಬ್‌ ಹೊಂದಿರುವ ವಿಶೇಷ ವಿನ್ಯಾಸದ ದಿರಿಸನ್ನು ಧರಿಸಿ ನಿಂತು, ಭಾರತದ ಪ್ರಧಾನಿ ಮೋದಿ ಒಬ್ಬ ಹಿಟ್ಲರ್‌ ಎಂದು ಜರೆದಿದ್ದಾರೆ.

Advertisement

ಇದಕ್ಕೆ ಟ್ವಿಟರ್‌ನಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಕೆಲವರು, “ಈ ನಿಮ್ಮ ಬಾಂಬ್‌ ವೇಷ, ನಿಮ್ಮ ದೇಶದ (ಪಾಕಿಸ್ಥಾನದ) ರಾಷ್ಟ್ರೀಯ ಸಮವಸ್ತ್ರವಾ?’ ಎಂದಿದ್ದರೆ, ಮತ್ತೂ ಕೆಲವರು, “ಇದು ನಿಮ್ಮ ಸಾಂಪ್ರದಾಯಿಕ ಉಡುಗೆಯೇ?’ ಎಂದು ಲೇವಡಿ ಮಾಡಿದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ರಬಿ ಮಾಡುತ್ತಿರುವ ಹುಚ್ಚಾಟಗಳನ್ನು ಗಂಭೀರವಾಗಿ ಪರಿಗಣಿಸಿರುವ ಪಾಕಿಸ್ಥಾನದ ಪಂಜಾಬ್‌ ಸರಕಾರ ಆಕೆಯ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next