Advertisement

ಭಾರತ ಜತೆಗಿನ ಉದ್ವಿಗ್ನತೆ ಶಮನಕ್ಕೆ ತುರ್ತಾಗಿ ನೆರವಾಗಿ: UNಗೆ ಪಾಕ್‌

07:16 AM Feb 19, 2019 | Team Udayavani |

ಇಸ್ಲಾಮಾಬಾದ್‌ : 40 ಭಾರತೀಯ ಯೋಧರನ್ನು ಬಲಿ ಪಡೆದಿರುವ ಪುಲ್ವಾಮಾ ಉಗ್ರ ದಾಳಿಯಿಂದಾಗಿ ಪರಾಕಾಷ್ಠೆಗೆ ತಲುಪಿರುವ ಭಾರತದೊಂದಿಗಿನ ಉದ್ವಿಗ್ನತೆಯನ್ನು ಶಮನಗೊಳಿಸಲು ವಿಶ್ವಸಂಸ್ಥೆ ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ಪಾಕಿಸ್ಥಾನ ಬೇಡಿಕೊಂಡಿದೆ.

Advertisement

ಕಳೆದ ಫೆ.14ರಂದು ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪೋರಾದಲ್ಲಿ ಪಾಕ್‌ಮೂಲದ ಜೈಶ್‌ ಸಂಘಟನೆಯ ಉಗ್ರನೋರ್ವ ಆತ್ಮಾಹುತಿ ಬಾಂಬ್‌ ದಾಳಿ ನಡೆಸಿ 40 ಭಾರತೀಯ ಯೋಧರನ್ನು ಬಲಿಪಡೆದಿದ್ದ. ಈ ಹಿನ್ನೆಲೆಯಲ್ಲಿ ಭಾರತ -ಪಾಕ್‌ ತಮ್ಮ ರಾಜತಾಂತ್ರಿಕರನ್ನು ಹಿಂದಕ್ಕೆ  ಕರೆಸಿಕೊಂಡಿದ್ದು ಉಭಯ ದೇಶಗಳ ನಡುವಿನ ಉದ್ವಿಗ್ನತೆ ಪರಾಕಾಷ್ಠೆಗೇರಿದೆ. 

ಪಾಕ್‌ ವಿದೇಶ ಸಚಿವ ಶಾ ಮಹಮೂದ್‌ ಕುರೇಶಿ ಅವರು ವಿಶ್ವ ಸಂಸ್ಥೆಯ ಮಹಾ ಕಾರ್ಯದರ್ಶಿ ಅಂಟೋನಿಯೋ ಗುಟೆರೆಸ್‌ ಅವರಿಗೆ ಪತ್ರ ಬರೆದು ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ದಿಶೆಯಲ್ಲಿ ತುರ್ತಾಗಿ ನೆರವಾಗುವಂತೆ ವಿಶ್ವಸಂಸ್ಥೆಯನ್ನು ಕೋರಿದ್ದಾರೆ. 

ಕಾಶ್ಮೀರ ವಿಷಯದಲ್ಲಿ ಯಾವುದೇ ತೃತೀಯ ಪಕ್ಷದ ಹಸ್ತಕ್ಷೇಪವನ್ನು  ಸಾರಾಸಗಟು ತಿರಸ್ಕರಿಸಿರುವ ಭಾರತ, ಪಾಕಿಸ್ಥಾನದ ಜತೆಗಿನ ಯಾವತ್ತೂ ವಿವಾದಗಳನ್ನು ದ್ವಿಪಕ್ಷೀಯ ನೆಲೆಯಲ್ಲೇ ಪರಿಹರಿಸಿಕೊಳ್ಳಬೇಕಿದೆ ಎಂದು ಪಟ್ಟು ಹಿಡಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next