Advertisement

ಭಾರತದಲ್ಲಿ ರಹಸ್ಯ ಅಣ್ವಸ್ತ್ರ ನಗರವಿದೆಯಂತೆ!: ಪಾಕ್‌

12:56 PM Feb 10, 2017 | Team Udayavani |

ಇಸ್ಲಾಮಾಬಾದ್‌/ನವದೆಹಲಿ: ಭಾರತ ಪರಮಾಣು ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಲು ಗುಪ್ತ ಪರಮಾಣು ನಗರವೊಂದನ್ನು ನಿರ್ಮಿಸುತ್ತಿದೆ ಎಂದು ಪಾಕಿಸ್ತಾನ ಆರೋಪ ಮಾಡಿದೆ. ಇದರಲ್ಲಿ ಖಂಡಾಂತರ ಕ್ಷಿಪಣಿಗಳು, ಪರಮಾಣು ದಾಸ್ತಾನು ಮಾಡಲು ಉದ್ದೇಶಿಸಲಾಗಿದೆ ಎಂದು ಪಾಕ್‌ ವಿದೇಶಾಂಗ ಕಚೇರಿ ವಕ್ತಾರರಾದ ನಫೀಸ್‌ ಜಕಾರಿಯಾ ಆರೋಪಿಸಿದ್ದಾರೆ.

Advertisement

ಆದರೆ ಪಾಕ್‌ನ ಆರೋಪ ಸಂಪೂರ್ಣ ಆಧಾರ ರಹಿತ. ಭಯೋತ್ಪಾದನೆ ಮೇಲಿನ ಗಮನ ಬೇರೆಡೆಗೆ ತಿರುಗಿಸಲು ಪಾಕ್‌ ಇಂತಹ ಆರೋಪಗಳಲ್ಲಿ ನಿರತವಾಗಿದೆ ಎಂದು ಭಾರತದ ವಿದೇಶಾಂಗ ಇಲಾಖೆ ತಿರುಗೇಟು ನೀಡಿದೆ.

ಸಮರಾಭ್ಯಾಸ: ಇನ್ನು ಪಾಕ್‌ ಆಯೋಜಿಸುತ್ತಿರುವ ಅಮನ್‌-17 ಹೆಸರಿನ ಐದು ದಿನಗಳ ನೌಕಾ ಸಮರಾಭ್ಯಾಸ ಅರಬ್ಬೀ ಸಮುದ್ರದಲ್ಲಿ ಶುಕ್ರವಾರದಿಂದ ಶುರುವಾಗಲಿದೆ. ಅಮೆರಿಕ, ಚೀನಾ, ರಷ್ಯಾ, ಫ್ರಾನ್ಸ್‌ ಸೇರಿದಂತೆ 36 ರಾಷ್ಟ್ರಗಳು ಇದರಲ್ಲಿ ಭಾಗಿಯಾಗಲಿವೆ ಎಂದು ಪಾಕ್‌ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next