ನವದೆಹಲಿ: ಪ್ರತಿನಿತ್ಯ 12 ಸಲ ಕದನ ವಿರಾಮ ಉಲ್ಲಂಘನೆ! ಇತ್ತೀಚಿಗಿನ ಕದನ ವಿರಾಮ ಒಪ್ಪಂದಕ್ಕೂ ಮುನ್ನ ಪಾಕ್‌ನ ಅತಿರೇಕದ ದುರ್ನಡತೆಗೆ ಸಾಕ್ಷಿ ಇದು.
2020ರ ಫೆಬ್ರವರಿಯಿಂದ 2021ರ ಫೆಬ್ರವರಿ ನಡುವಿನ 1 ವರ್ಷದಲ್ಲಿ ಪಾಕಿಸ್ತಾನ ಅತಿ ಹೆಚ್ಚು ಬಾರಿ ಗಡಿ ನಿಯಮ ಉಲ್ಲಂಘಿಸಿತ್ತು!
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ದತ್ತಾಂಶ ವರದಿ, “2003ರಷ್ಟೇ ತೀವ್ರವಾಗಿ 2020ರಲ್ಲೂ ಪಾಕಿಸ್ತಾನ ಎಲ್‌ಒಸಿಯಲ್ಲಿ ಪ್ರಚೋದನೆ ನಡೆಸಿದೆ. ಕಳೆದ ವರ್ಷ ಒಟ್ಟು 4,645 ಬಾರಿ ಪಾಕ್ ಗಡಿ ನಿಯಮ ಉಲ್ಲಂಘಿಸಿತ್ತು. ದಿನಕ್ಕೆ 12 ಬಾರಿ ಎಂಬಂತೆ ಎಲ್‌ಒಸಿಯಲ್ಲಿ ತಂಟೆ ಸೃಷ್ಟಿಸಿತ್ತು’ ಎಂದು ತಿಳಿಸಿದೆ.
ಇದನ್ನೂ ಓದಿ :ಕಲಾಪ ಬಹಿಷ್ಕಾರ : ವಕೀಲರ ಸಂಘಗಳಿಗೆ ಹೈಕೋರ್ಟ್ ನೋಟಿಸ್
“ಕಳೆದ ವರ್ಷ ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವೆ ಪಾಕ್ 835 ಬಾರಿ ಕದನ ವಿರಾಮ ಉಲ್ಲಂಘಿಸಿತ್ತು. ಕೇವಲ ಆಗಸ್ಟ್ ತಿಂಗಳೊಂದರಲ್ಲೇ 427 ಬಾರಿ ಗಡಿಯಲ್ಲಿ ಪ್ರಚೋದನೆ ನಡೆಸಿದೆ. ಪ್ರತಿ ಬಾರಿ ಪಾಕ್ ಪ್ರಚೋದನೆ ಎಬ್ಬಿಸಿದಾಗಲೂ ಭಾರತೀಯ ಸೇನೆ ಇದಕ್ಕೆ ಪ್ರತ್ಯುತ್ತರ ನೀಡಿದೆ’ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.