Advertisement

ಪ್ರಧಾನಿ ಪ್ರಮಾಣಕ್ಕೆ ಅಧ್ಯಕ್ಷರೇ ಗೈರು! ಅನಾರೋಗ್ಯದ ನೆಪ ಹೇಳಿದ ಪಾಕ್‌ ಅಧ್ಯಕ್ಷ ಅಳ್ವಿ

01:14 AM Apr 12, 2022 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನದ 23ನೇ ಪ್ರಧಾನಿಯಾಗಿ ಶಹಬಾಜ್‌ ಷರೀಫ್ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೂ ಪಾಕ್‌ನಲ್ಲಿ ರಾಜಕೀಯ ಚದುರಂಗದಾಟ ಮಾತ್ರ ನಿಂತಿಲ್ಲ.

Advertisement

ಶಹಬಾಜ್‌ ಪ್ರಧಾನಿಯಾಗಿ ನೇಮಕಗೊಂಡೊಡನೆ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಸೇರಿದಂತೆ ಅವರ ಪಕ್ಷದ ಎಲ್ಲ ಸಚಿವರೂ ರಾಜೀನಾಮೆ ನೀಡಿದ್ದಾರೆ. ಇನ್ನೇನು ಅಧ್ಯಕ್ಷ ಆರಿಫ್ ಅಳ್ವಿ ಅವರೂ ರಾಜೀನಾಮೆ ನೀಡುತ್ತಾರೆ ಎನ್ನುವಾಗಲೇ ಅವರು ದಿಢೀರ್‌ ರಜೆ ಹಾಕಿ ಹೋಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆರಿಫ್ ಅವರಿಗೆ ಇಮ್ರಾನ್‌ ಸೂಚಿಸಿದ್ದರು. ಆದರೆ ರಾಜೀನಾಮೆ ನೀಡಲು ಮನಸ್ಸಿಲ್ಲದೇ ಅವರು, ತಾವು ಅಸ್ವಸ್ಥರಾಗಿರುವುದಾಗಿ ಹೇಳಿ ರಜೆ ಹಾಕಿದ್ದಾರೆ.

ಷರೀಫ್ ವಾಪಸ್‌: ಇನ್ನು ಸದ್ಯ ಲಂಡನ್‌ನಲ್ಲಿರುವ ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್ ಅವರು ಮುಂದಿನ ತಿಂಗಳು ಈದ್‌ ಹಬ್ಬ ಮುಗಿಯುತ್ತಿದ್ದಂತೆ ಪಾಕ್‌ಗೆ ವಾಪಸಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next