Advertisement

ಕಾಶ್ಮೀರ ಭಾರತದ ಭಾಗ ಎಂದ ಇಬ್ಬರು ಪತ್ರಕರ್ತರನ್ನು ಪಾಕ್ ಏನು ಮಾಡಿದೆ ಗೊತ್ತಾ?

05:53 PM Jun 12, 2020 | Nagendra Trasi |

ಇಸ್ಲಾಮಾಬಾದ್:ಜಮ್ಮು-ಕಾಶ್ಮೀರ ಭಾರತದ ಅವಿಭಾವಿಜ್ಯ ಅಂಗ ಎಂದು ಸುದ್ದಿ ಬಿತ್ತರಿಸಿದ್ದ ಪಾಕ್ ನ ಸರ್ಕಾರಿ ಮಾಧ್ಯಮ ಪಿ-ಟಿವಿ ನ್ಯೂಸ್ ನ ಇಬ್ಬರು ಪತ್ರಕರ್ತರನ್ನು ಕೆಲಸದಿಂದ ತೆಗೆದುಹಾಕಿರುವ ಪ್ರಸಂಗ ನಡೆದಿದೆ ಎಂದು ವರದಿ ತಿಳಿಸಿದೆ.

Advertisement

ಕಾಶ್ಮೀರದ ನಕ್ಷೆಯನ್ನು ತಪ್ಪಾಗಿ ಪ್ರದರ್ಶಿಸಿ, ಕಾಶ್ಮೀರ ಪ್ರದೇಶವನ್ನು ಭಾರತದ ಅಂಗ ಎಂದು ತೋರ್ಪಡಿಸಿರುವ ಆರೋಪದ ಮೇಲೆ ಇಬ್ಬರು ಪತ್ರಕರ್ತರನ್ನು ವಜಾಗೊಳಿಸಿರುವುದಾಗಿ ಹೇಳಿದೆ.

ಪಾಕಿಸ್ತಾನ್ ಟೆಲಿವಿಷನ್ (ಪಿಟಿವಿ) ಮಂಡಳಿ ಜೂನ್ 7ರಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿರುವ ಪ್ರಕಾರ, ಈ ಘಟನೆ ಬಗ್ಗೆ ತನಿಖೆ ನಡೆಸಿದ್ದು, ಪ್ರಮಾದ ಎಸಗಿದ ಹೊಣೆಯ ಮೇಲೆ ಇಬ್ಬರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದೆ.

ಕೆಲಸದಿಂದ ವಜಾಗೊಳಿಸಲ್ಪಟ್ಟ ಇಬ್ಬರು ಪತ್ರಕರ್ತರ ಗುರುತನ್ನು ಬಹಿರಂಗಪಡಿಸಿಲ್ಲ. ಪಿಟಿವಿಯಲ್ಲಿ ಕಾಶ್ಮೀರವನ್ನು ಭಾರತದ ಅಂಗ ಎಂದು ಸುದ್ದಿ ಬಿತ್ತರಿಸಿದ್ದ ಇಬ್ಬರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫಾವದ್ ಚೌಧರಿ ಮತ್ತು ಮಾನವ ಹಕ್ಕು ಸಚಿವ ಶಿರೀನ್ ಮಾಝಾರಿ ಒತ್ತಾಯಿಸಿದ್ದರು. ಪಾಕಿಸ್ತಾನದ ಅಧಿಕೃತ ಭೂಪಟದಲ್ಲಿ ಕಾಶ್ಮೀರ ಪಾಕಿಸ್ತಾನದ ಭಾಗ ಎಂದು ತೋರ್ಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next