Advertisement

Pak; ನವಾಜ್‌ ಪಿಎಂ ಹಂಬಲಿಕೆಗೆ ಕೊಕ್ಕೆ ಹಾಕಿದ್ದು ಸೇನೆ!

12:35 AM Feb 19, 2024 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನದಲ್ಲಿ 4ನೇ ಬಾರಿಗೆ ಪ್ರಧಾನಿ ಆಗಬೇಕು ಎಂಬ ನವಾಜ್‌ ಶರೀಫ್ ಮಹತ್ವಾಕಾಂಕ್ಷೆಗೆ ಆ ದೇಶ ಸೇನೆಯೇ ಕೊಕ್ಕೆ ಹಾಕಿದ್ದ ಅಂಶ ಬೆಳಕಿಗೆ ಬಂದಿದೆ. ಒಂದೋ ನವಾಜ್‌ ಶರೀಫ್ ಪ್ರಧಾನಿ ಆಗಬೇಕು ಇಲ್ಲ  ದಿದ್ದರೆ, ಪಂಜಾಬ್‌ ಸಿಎಂ ಹುದ್ದೆಗೆ ಪುತ್ರಿ ಮರ್ಯಾಮ್‌ ನವಾಜ್‌ರನ್ನು ನೇಮಿಸ ಬೇಕು ಎಂದು ಖಡಕ್‌ ಮಾತುಗಳಿಂದ ಹೇಳಿತ್ತು ಎಂದು ಗೊತ್ತಾಗಿದೆ.

Advertisement

ಹೀಗಾಗಿ ನಿರುಪಾಯರಾಗಿ ಪ್ರಧಾನಿ ಹುದ್ದೆಗೆ ಸಹೋದರ ಶೆಹಭಾಜ್‌ ಶ‌ರೀ ಫ್ ಮತ್ತು ಪಂಜಾಬ್‌ ಪ್ರಾಂತದ ಸಿಎಂ ಹುದ್ದೆಗೆ ಪುತ್ರಿಯ ನೇಮಕಕ್ಕೆ ನವಾಜ್‌ ಒಪ್ಪಿಕೊಳ್ಳಬೇಕಾಯಿತು ಎನ್ನಲಾಗಿದೆ.
ಪೊಲೀಸರ ಜತೆಗೆ ಪ್ರತಿಭಟನೆ: ಚುನಾವಣೆಯಲ್ಲಿ ಅಕ್ರಮ ನಡೆ ದಿದೆ ಎಂದು ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಪಿಟಿಐ ಪಕ್ಷದ ಕಾರ್ಯ ಕರ್ತರು ಪೊಲೀಸರ ಜತೆಗೆ ಘರ್ಷಣೆಗೆ ಇಳಿದಿದ್ದಾರೆ. ಪ್ರಮುಖವಾಗಿ ಪಂಜಾ ಬ್‌ ಪ್ರಾಂತದ ರಾಜಧಾನಿ ಲಾಹೋರ್‌ ಸೇರಿದಂತೆ ಹಲವು ನಗರಗಳಲ್ಲಿ ಪೊಲೀ ಸರ ಜತೆಗೆ ಬಡಿದಾಡಿಕೊಂಡಿದ್ದಾರೆ.

ಒಮ್ಮತವಾಗದ ಪಾಕ್‌ಅಧಿಕಾರ ಹಂಚಿಕೆ ಸೂತ್ರ
ಪಾಕಿಸ್ಥಾನದಲ್ಲಿ ಸಮ್ಮಿಶ್ರ ಸರಕಾರ ರಚಿಸುವುದಕ್ಕೆ ಸಂಬಂಧಿಸಿದಂತೆ ಪಿಎಂಎಲ್‌ ಎನ್‌ ಹಾಗೂ ಪಿಪಿಪಿ ಪಕ್ಷಗಳ ನಡುವೆ ಅಧಿಕಾರ ಹಂಚಿಕೆ ವಿಚಾರವಾಗಿ ಒಮ್ಮತ ಮೂಡಿಲ್ಲ. ಈ ಹಿನ್ನೆಲೆಯಲ್ಲಿ ಸೋಮವಾರ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಇದು ಉಭಯ ಪಕ್ಷಗಳ ನಡುವೆ ನಡೆಯುತ್ತಿರುವ 4ನೇ ಸಭೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next