Advertisement
ಖುರೇಷಿ ಚೀನದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾಗಲಿದ್ದಾರೆ. ಸೌದಿಯಿಂದ ಪಡೆದಿ ರುವ 1 ಬಿಲಿಯನ್ ಡಾಲರ್‌ಗೂ ಅಧಿಕ ಸಾಲ ತೀರಿಸಲು ಪಾಕ್‌ಗೆ, ಚೀನ ನೆರವಾಗಲಿದೆ. ಇದಲ್ಲದೆ ಆರ್ಥಿಕ ಕಾರಿಡಾರ್ ಸಂಬಂಧಿತ ಯೋಜನೆಗಳು, ದ್ವಿಪಕ್ಷೀಯ ಸಂಬಂಧಗಳ ಕುರಿತು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ನಡೆಯಲಿದೆ. ವರ್ಷಾಂತ್ಯಕ್ಕೆ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪಾಕಿಸ್ಥಾನಕ್ಕೆ ಭೇಟಿ ನೀಡಿ, ಕಾರಿಡಾರ್ ಕಾಮಗಾರಿಗಳನ್ನು ಖುದ್ದಾಗಿ ವೀಕ್ಷಿಸಲಿದ್ದಾರೆ. ಪಾಕ್ ಪ್ರಧಾನಿ ಇತ್ತೀಚೆಗಷ್ಟೇ ಸರಕಾರಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ “ಪಾಕ್‌ನ ಭವಿಷ್ಯ ಚೀನ ಜತೆ ಎನ್ನುವುದು ಸ್ಪಷ್ಟ. ಚೀನಕ್ಕೂ ಪಾಕ್ ಆವಶ್ಯಕತೆ ಇದೆ’ ಎಂದಿದ್ದರು. ಈ ಹೇಳಿಕೆ ಬೆನ್ನಲ್ಲೇ ಖುರೇಷಿ ಭೇಟಿ ಕುತೂಹಲ ಹುಟ್ಟಿಸಿದೆ.
ಭಾರತ- ಚೀನ ನಡುವಿನ ಗಡಿ ಬಿಕ್ಕಟ್ಟಿನ ಕುರಿತು ಚರ್ಚಿಸಲು ಸಮಾಲೋಚನೆ ಮತ್ತು ಸಹಕಾರ ಕಾರ್ಯವಿಧಾನ ಸಭೆ (ಡಬ್ಲ್ಯುಎಂಸಿಸಿ) ಗುರುವಾರ ನಡೆಯಿತು. ಉಭಯ ರಾಷ್ಟ್ರಗಳ ಕಾರ್ಪ್ ಕಮಾಂಡರ್ ನಡುವಿನ 18ನೇ ಡಬ್ಲ್ಯುಎಂಸಿಸಿ ಸಭೆ ಇದಾಗಿದ್ದು, ಎಲ್‌ಎಸಿ ಭಾಗಗಳಿಂದ ಸೇನಾ ತೆರವು ಕಾರ್ಯಾಚರಣೆ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ. ಹಿರಿಯ ಕಮಾಂಡರ್‌ಗಳ ಮುಂದಿನ ಸಭೆಯಲ್ಲಿ ಡಬ್ಲ್ಯುಎಂಸಿಸಿ ಸಭೆಯ ಫಲಿತಾಂಶಗಳನ್ನು ಪ್ರಕಟಿಸಲಾಗುತ್ತದೆ.