Advertisement
ವಾಷಿಂಗ್ಟನ್‌ನಲ್ಲಿ ಅಮೆರಿಕ ಸಂಸದರ ಚಿಂತಕರ ಚಾವಡಿ ‘ಯು.ಎಸ್. ಇನ್‌ಸ್ಟಿಟ್ಯೂಟ್ ಆಫ್ ಪೀಸ್’ನಲ್ಲಿ ಮಾತನಾಡುವಾಗ ಈ ವಿಚಾರ ಹೊರಹಾಕಿದ್ದಾರೆ. ‘ಪಾಕ್‌ನ ಹಿಂದಿನ ಎಲ್ಲ ಸರಕಾರಗಳೂ ಭಯೋತ್ಪಾದಕರ ಬಗ್ಗೆ ಅಮೆರಿಕಕ್ಕೆ ಸುಳ್ಳು ಮಾಹಿತಿಗಳನ್ನೇ ನೀಡುತ್ತಾ ಬಂದಿವೆ. ವಿಶೇಷವಾಗಿ ಕಳೆದ 15 ವರ್ಷಗಳಲ್ಲಿ ಪಾಕಿಸ್ಥಾನದಲ್ಲಿರುವ 40 ಉಗ್ರ ಸಂಘಟನೆಗಳ ಮಾಹಿತಿ ಅಡಗಿಸಿಡಲಾಗಿದೆ’ ಎಂದು ಖಾನ್ ಆರೋಪಿಸಿದ್ದಾರೆ.
ಪಾಕಿಸ್ಥಾನದ ಗುಪ್ತಚರ ಇಲಾಖೆ ಐಎಸ್‌ಐ ಸಹಾಯದಿಂದಲೇ ಅಮೆರಿಕಕ್ಕೆ ಉಗ್ರ ಒಸಾಮ ಬಿನ್ ಲಾಡೆನ್‌ನನ್ನು ಹತ್ಯೆಗೈಯ್ಯಲು ಸಾಧ್ಯವಾಗಿದ್ದು ಎಂದು ಇಮ್ರಾನ್ ಖಾನ್ ನೀಡಿದ್ದ ಹೇಳಿಕೆಗೆ ಅಮೆರಿಕದ ಗುಪ್ತಚರ ಇಲಾಖೆಯ (ಸಿಐಎ) ಮಾಜಿ ಮಹಾ ನಿರ್ದೇಶಕ ಡೇವಿಡ್ ಪೆಟ್ರಾಸ್ ತಿರುಗೇಟು ನೀಡಿದ್ದಾರೆ. ಬಿನ್ ಲಾಡೆನ್ ಪಾಕ್‌ನಲ್ಲಿದ್ದ ವಿಚಾರ ಐಎಸ್‌ಐಗೆ ತಿಳಿದಿರಲಿಲ್ಲ ಎಂದಿದ್ದಾರೆ.