Advertisement

Pak flag ಹಾರಾಡುವ ವಾಟ್ಸಪ್ ಸ್ಟೇಟಸ್: ಯುವಕ ಪೊಲೀಸರ ವಶಕ್ಕೆ

06:44 PM Sep 17, 2024 | Team Udayavani |

ಕಲಾದಗಿ: ಮುಸ್ಲಿಂ ಯುವಕ ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಪಾಕ್ ಧ್ವಜ ಹಾರಾಡುವ ರೀಲ್ಸ ನ್ನು ಸ್ಟೇಟಸ್ ಇಟ್ಟಕೊಂಡಿದ್ದ ಈತನನ್ನು ಕಲಾದಗಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಗ್ರಾಮದ ಯುವಕ ತೌಶಿಪ್ ಮೊಹಮ್ಮದ್ ಮೆಹತರ್(21) ಎಂಬಾತನೇ ಈ ಕೃತ್ಯ ಮಾಡಿದ ಯುವಕ.

ಈದ್ ಮಿಲಾದ ಹಬ್ಬದ ದಿನ ಸೆ 16ರಂದು ರಾತ್ರಿ 11.27ಕ್ಕೆ ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಕಪ್ಪು ಕಾರುಗಳ ಮೇಲೆ ಪಾಕ್ ಧ್ವಜ ಹಾರಾಡುತ್ತಿರುವ ವಿಡಿಯೋ ರೀಲ್ಸ್ ಸ್ಟೇಟಸನ್ನು ಹಾಕಿಕೊಂಡಿದ್ದ, ಇದನ್ನು ಗಮನಿಸಿದ ಹಿಂದೂ ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ನಿಟ್ಟಿನಲ್ಲಿ ಮಾಹಿತಿ ಪಡೆದ ಠಾಣಾ ಪಿಎಸೈ ಚಂದ್ರಶೇಖರ ಹೇರಕಲ್ ನೇತೃತ್ವದ ಪೊಲೀಸ್ ತಂಡ ಮಂಗಳವಾರ ಮುಂಜಾನೆ ತೌಶಿಪ್ ಮೆಹತರ ನನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next