Advertisement

ಭಾರತ ಗಡಿ ವಾಯು ಪ್ರದೇಶ ಮುಚ್ಚುಗಡೆಯನ್ನು ಜೂನ್‌ 15ರ ವರೆಗೆ ವಿಸ್ತರಿಸಿದ ಪಾಕ್‌

05:08 PM Jun 01, 2019 | Sathish malya |

ಇಸ್ಲಾಮಾಬಾದ್‌ : ಪಾಕಿಸ್ಥಾನ ಭಾರತದೊಂದಿಗಿನ ತನ್ನ ಪೂರ್ವದ ಗಡಿಯ ವಾಯು ಪ್ರದೇಶದ ಮುಚ್ಚುಗಡೆಯನ್ನು ಜೂನ್‌ 15 ವರೆಗೂ ವಿಸ್ತರಿಸಿದೆ.

Advertisement

ಈ ವರ್ಷ ಫೆಬ್ರವರಿಯಲ್ಲಿ ಭಾರತ, ಪಾಕಿಸ್ಥಾನದ ಬಾಲಾಕೋಟ್‌ ನಲ್ಲಿರುವ ಜೈಶ್‌ ಎ ಮೊಹಮ್ಮದ್‌ ಸಂಘಟನೆಯ ಉಗ್ರ ಶಿಬಿರಗಳ ಮೇಲೆ ಬಾಂಬ್‌ ದಾಳಿ ನಡೆಸಿದ್ದನ್ನು ಅನುಸರಿಸಿ ಪೂರ್ವದ ಗಡಿಯ ಉದ್ದಕ್ಕೂ ಇರುವ ತನ್ನ ವಾಯು ಪ್ರದೇಶವನ್ನು ಮುಚ್ಚಿತ್ತು.

ಕಳೆದ ಮಾರ್ಚ್‌ 27ರಂದು ಪಾಕಿಸ್ಥಾನ, ಹೊಸದಿಲ್ಲಿ , ಬ್ಯಾಂಕಾಕ್‌ ಮತ್ತು ಕೌಲಾಲಂಪುರ ವನ್ನು ಹೊರತುಪಡಿಸಿ ಇತರೆಲ್ಲ ವಿಮಾನ ಹಾರಾಟಗಳಿಗೆ ತನ್ನವಾಯು ಪ್ರದೇಶವನ್ನು ತೆರೆದಿತ್ತು.

ಕಳೆದ ಮೇ 15ರಂದು ಪಾಕಿಸ್ಥಾನ ತನ್ನ ವಾಯು ಪ್ರದೇಶದ ಮುಚ್ಚುಗಡೆಯನ್ನು ಮೇ 30ರ ವರೆಗೆ ವಿಸ್ತರಿಸಿತ್ತು. ಇದೀಗ ಹೊಸ ಆದೇಶದ ಪ್ರಕಾರ ಈ ಮುಚ್ಚುಗಡೆಯನ್ನು ಜೂನ್‌ 15ರ ವರೆಗೆ ವಿಸ್ತರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next