ಕರಾಚಿ : ಇದೇ ಗುರುವಾರ ಮೇ 30ರಂದು ನಡೆಯಲಿರುವ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಇಮ್ರಾನ್ ಖಾನ್ ಅವರನ್ನು ಆಹ್ವಾನಿಸದಿರುವ ಭಾರತದ ನಿರ್ಧಾರಕ್ಕೆ ಯಾವುದೇ ಮಹತ್ವ ನೀಡದಿರಲು ಪಾಕಿಸ್ಥಾನ ಯತ್ನಿಸುತ್ತಿದೆ.
ಭಾರತೀಯ ಪ್ರಧಾನಿಯ ಆಂತರಿಕ ರಾಜಕಾರಣವು ಅವರಿಗೆ ಪಾಕ್ ಪ್ರಧಾನಿಗೆ ಆಹ್ವಾನ ನೀಡದಂತೆ ತಡೆಯುತ್ತಿದೆ ಎಂದು ಪಾಕಿಸ್ಥಾನ ಹೇಳಿದೆ.
ಮೋದಿ ಪ್ರಮಾಣ ವಚನ ಸಮಾರಂಭಕ್ಕಿಂತಲೂ ನಮಗೆ ಭಾರತದ ಜತೆಗೆ ಕಾಶ್ಮೀರ, ಸರ್ ಕ್ರೀಕ್, ಸಿಯಾಚಿನ್ ವಿವಾದ ಬಗೆ ಹರಿಸುವ ಮಾತುಕತೆಯೇ ಮುಖ್ಯ ಎಂದು ಪಾಕ್ ವಿದೇಶ ಸಚಿವ ಶಾ ಮಹಮೂದ್ ಕುರೇಶಿ ಹೇಳಿದ್ದಾರೆ.
ಭಾರತ ಸರಕಾರ ನಿನ್ನೆ ಸೋಮವಾರ ಬಿಮ್‌ಸ್ಟೆಕ್ ದೇಶಗಳ ನಾಯಕರಿಗೆ ಪ್ರಧಾನಿ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ ಎಂದು ಹೊಸದಿಲ್ಲಿ ಹೇಳಿತ್ತು.
ಬಿಮ್‌ಸ್ಟೆಕ್ ದೇಶಗಳೆಂದರೆ ಪಾಕಿಸ್ಥಾನ ರಹಿತವಾದ ಪ್ರಾದೇಶಿಕ ಸಮೂಹವಾಗಿದ್ದು ಇದರಲ್ಲಿ ಬಾಂಗ್ಲಾದೇಶ, ಭಾರತ, ಮ್ಯಾನ್‌ಮಾರ್, ಶ್ರೀಲಂಕಾ, ಥಾಯ್ಲಂಡ್, ಭೂತಾನ್ ಮತ್ತು ನೇಪಾಲ ದೇಶಗಳು ಇವೆ.