Advertisement

ಫಿಟ್‌ನೆಸ್‌ ಇಲ್ಲದಿದ್ದರೆ ಪಾಕ್‌ ಕ್ರಿಕೆಟಿಗರ ವೇತನ ಕಡಿತ!

11:13 PM Jan 03, 2020 | Team Udayavani |

ಕರಾಚಿ: ಪಾಕಿಸ್ಥಾನ ಕ್ರಿಕೆಟನ್ನು ಸಂಪೂರ್ಣ ಸುಧಾರಿಸುವ ಗುರಿಯೊಂದಿಗೆ ಅಲ್ಲಿನ ಕ್ರಿಕೆಟ್‌ ಮಂಡಳಿ ಹೋರಾಟ ಶುರು ಮಾಡಿದೆ. ಇನ್ನು ಮುಂದೆ ಕನಿಷ್ಠ ದೈಹಿಕ ಕ್ಷಮತೆ ಸಾಬೀತು ಮಾಡದ ಗುತ್ತಿಗೆ ಹೊಂದಿರುವ ಕ್ರಿಕೆಟಿಗರು, ತಮ್ಮ ವೇತನದಲ್ಲಿ ಶೇ.15ರಷ್ಟು ಹಣವನ್ನು ಕಳೆದುಕೊಳ್ಳಲಿದ್ದಾರೆ.ಜ. 5, 6ರಂದು ಪಿಸಿಬಿ ದೈಹಿಕ ಪರೀಕ್ಷೆ ನಡೆಸಲಿದೆ.

Advertisement

ವಹಾಬ್‌ ರಿಯಾಜ್‌, ಮೊಹಮ್ಮದ್‌ ಆಮಿರ್‌, ಶಾದಾಬ್‌ ಖಾನ್‌ ಸದ್ಯ ಬಾಂಗ್ಲಾದೇಶದ ಟಿ20 ಲೀಗ್‌ನಲ್ಲಿ ಆಡುತ್ತಿರುವುದರಿಂದ ಅವರಿಗೆ ರಿಯಾಯಿತಿ ನೀಡಲಾಗಿದೆ.

ಅವರು ಜ. 20, 21ರಂದು ಪರೀಕ್ಷೆಗೊಳಪಡಲಿದ್ದಾರೆ.ಎಲ್ಲಿಯ ವರೆಗೆ ಕ್ರಿಕೆಟಿಗರು ದೈಹಿಕ ಕ್ಷಮತೆ ಸಾಬೀತು ಮಾಡುವುದಿಲ್ಲವೋ, ಅಲ್ಲಿಯ ವರೆಗೆ ಅವರ ವೇತನ ಕಡಿತವಾಗುತ್ತಲೇ ಇರುತ್ತದೆ ಎಂದು ಪಿಸಿಬಿ ಎಚ್ಚರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next