Advertisement

ಅಭಿನಂದನ್ ಅವರನ್ನು ಸೆರೆ ಹಿಡಿದಿದ್ದ ಪಾಕ್ ಸೈನಿಕ ಗಡಿಯಲ್ಲಿ ಗುಂಡಿಗೆ ಬಲಿ

09:52 AM Aug 21, 2019 | Hari Prasad |

ನವದೆಹಲಿ: ಪಾಕಿಸ್ಥಾನದ ಭೂಪ್ರದೇಶದಲ್ಲಿ ಪತನಗೊಂಡಿದ್ದ ಭಾರತೀಯ ಯುದ್ಧ ವಿಮಾನದ ಪೈಲಟ್ ಅಭಿನಂದನ್ ವರ್ತಮಾನ್ ಅವರನ್ನು ಸೆರೆ ಹಿಡಿದು ಅವರಿಗೆ ಹಿಂಸೆ ನೀಡಿದ್ದ ಪಾಕಿಸ್ಥಾನ ಯೋಧರಲ್ಲಿ ಒಬ್ಬ ಗಡಿ ಭಾಗದಲ್ಲಿ ಭಾರತೀಯ ಸೇನೆಯ ಗುಂಡಿಗೆ ಬಲಿಯಾಗಿರುವುದಾಗಿ ತಿಳಿದುಬಂದಿದೆ.

Advertisement

ಪಾಕಿಸ್ಥಾನ ಸೇನೆಯ ಸುಬೇದಾರ್ ಅಹಮ್ಮದ್ ಖಾನ್ ಎಂಬಾತನೇ ಗಡಿಯಲ್ಲಿ ಭಾರತೀಯ ಯೋಧರ ಗುಂಡಿಗೆ ಸಾವನ್ನಪ್ಪಿರುವ ಯೋಧನಾಗಿದ್ದು, ಆಗಸ್ಟ್ 17ರಂದು ನಕ್ಯಾಲ್ ಪ್ರದೇಶದಲ್ಲಿ ಅಹಮ್ಮದ್ ಖಾನ್ ಅತಿಕ್ರಮಣಕಾರರನ್ನು ಭಾರತದ ಭೂಪ್ರದೇಶದೊಳಕ್ಕೆ ನುಸುಳಿಸುವ ಯತ್ನದಲ್ಲಿದ್ದಾಗಲೇ ನಮ್ಮ ಯೋಧರ ಗುಂಡಿಗೆ ಬಲಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಕಳೆದ ಫೆಬ್ರವರಿ ತಿಂಗಳಿನಲ್ಲಿ ಅಭಿನಂದನ್ ಅವರು ಪಾಕಿಸ್ಥಾನೀ ಸೈನಿಕರ ವಶಕ್ಕೆ ಸಿಕ್ಕಿದ ಬಳಿಕ ಪಾಕ್ ಸೇನೆ ಬಿಡುಗಡೆಗೊಳಿಸಿದ್ದ ಫೊಟೋದಲ್ಲಿ ಗಡ್ಡಧಾರಿಯಾಗಿದ್ ಅಹಮ್ಮದ್ ಖಾನ್ ಅಭಿನಂದನ್ ಅವರನ್ನು ಹಿಡಿದುಕೊಂಡಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.

ನೌಶೇರಾ, ಸುಂದರ್ ಬನಿ ಮತ್ತು ಪಲ್ಲನ್ ವಾಲಾ ಪ್ರದೇಶಗಳಲ್ಲಿ ಭಾರೀ ಸಂಖ್ಯೆಯಲ್ಲಿ ತರಬೇತು ಹೊಂದಿದ ಜೈಶ್ ಉಗ್ರರನ್ನು ಭಾರತದ ಗಡಿಭಾಗದೊಳಕ್ಕೆ ಒಳನುಗ್ಗಿಸುವ ಜವಾಬ್ದಾರಿಯನ್ನು ಪಾಕಿಸ್ಥಾನ ಸೇನೆ ಅಹಮ್ಮದ್ ಖಾನ್ ಗೆ ವಹಿಸಿತ್ತು.

ಅದರಂತೆ ಆಗಸ್ಟ್ 17ರಂದು ಕೃಷ್ಣ ಘಾಟಿ ಪ್ರದೇಶದಲ್ಲಿ ಪಾಕ್ ಸೇನೆ ಭಾರೀ ಶೆಲ್ಲಿಂಗ್ ನಡೆಸುವ ಮೂಲಕ ಅತಿಕ್ರಮಣಕಾರರು ಒಳನುಸುಳಲು ಅನುವು ಮಾಡಿಕೊಡುತ್ತಿದ್ದ ಸಂದರ್ಭದಲ್ಲಿ ಭಾರತೀಯ ಸೇನೆ ಪ್ರತಿ ದಾಳಿಯನ್ನು ನಡೆಸಿದ ಸಂದರ್ಭದಲ್ಲಿ ಅಹಮ್ಮದ್ ಖಾನ್ ಸಾವನ್ನಪ್ಪಿದ್ದಾನೆ ಎಂದು ಸೇನಾ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next