Advertisement

ಯು.ಕೆ: ಬಲವಂತದ ಮತಾಂತರ: ಪಾಕ್‌ ನೇತಾರನಿಗೆ ನಿಷೇಧ

09:21 PM Dec 10, 2022 | Team Udayavani |

ಲಂಡನ್‌: ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರನ್ನು ಬಲವಂತವಾಗಿ ಮತಾಂತರ ಮಾಡಿದ ಪ್ರಕರಣದಲ್ಲಿ ಪಾಕಿಸ್ತಾನದ ಮುಸ್ಲಿಂ ಧಾರ್ಮಿಕ ವಿದ್ವಾಂಸನ ಮೇಲೆ ನಿಷೇಧ ಹೇರಲಾಗಿದೆ.

Advertisement

ಆತನನ್ನು ಮಿಯಾನ್‌ ಅಬ್ದುಲ್‌ ಹಕ್‌ ಎಂದು ಗುರುತಿಸಲಾಗಿದೆ. ಆತ ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ ಭಾರಿ ಪ್ರಭಾವಶಾಲಿಯಾಗಿದ್ದಾನೆ ಎಂದು ಯು.ಕೆ.ವಿದೇಶಾಂಗ ಸಚಿವ ಜೇಮ್ಸ್‌ ಕ್ಲೆವರ್ಲಿ ಹೇಳಿದ್ದಾರೆ. ಆತನೂ ಸೇರಿದಂತೆ ಒಟ್ಟು ಮೂವತ್ತು ಮಂದಿಯ ಮೇಲೆ ನಿಷೇಧ ಹೇರಲಾಗಿದೆ ಎಂದು ಅವರು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಹಾಗೂ ಭ್ರಷ್ಟಾಚಾರ ನಿಯಂತ್ರಣ ದಿನ ಪ್ರಯುಕ್ತ ಈ ತೀರ್ಮಾನಗಳನ್ನು ಪ್ರಕಟಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next