Advertisement

ಪಾಕ್‌ ತೊರೆದ ಚೀನೀಯರು; ಆರ್ಥಿಕ ಸಂಕಷ್ಟದಲ್ಲಿರುವ ದೇಶಕ್ಕೆ ಮತ್ತೊಂದು ಆಘಾತ

05:43 PM Apr 04, 2023 | Team Udayavani |

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ತುತ್ತು ಅನ್ನಕ್ಕೂ ಹಾಹಾಕಾರ ಉಂಟಾಗುತ್ತಿದೆ. ಇತರ ಯಾವ ರಾಷ್ಟ್ರಗಳಿಂದಲೂ ನಿರೀಕ್ಷಿತ ನೆರವು ಅದಕ್ಕೆ ಸಿಗುತ್ತಿಲ್ಲ. ಅದರ ಯಾವತ್ತೂ ಮಿತ್ರರಾಷ್ಟ್ರ ಎಂದು ಹೇಳಿಕೊಂಡ ಚೀನ ಕೂಡ ನಡುನೀರಿನಲ್ಲಿ ಕೈಬಿಟ್ಟಂತೆ ಇದೆ.

Advertisement

ದಿವಾಳಿಯ ಹಂತದಲ್ಲಿ ಇರುವ ರಾಷ್ಟ್ರದಲ್ಲಿ ಮೂವತ್ತು ಮೊಬೈಲ್‌ ಫೋನ್‌ ತಯಾರಿಕಾ ಘಟಕಗಳು ಬಾಗಿಲು ಮುಚ್ಚಿವೆ. ಅದಕ್ಕೆ ಕಾರಣವೂ ಇಲ್ಲದೇ ಇಲ್ಲ. ಪಾಕಿಸ್ತಾನ ಸರ್ಕಾರದ ಬಳಿ ವಿದೇಶಿ ವಿನಿಮಯ ಪ್ರಮಾಣವೂ ಕುಸಿತಗೊಂಡಿರುವುದರಿಂದ ಮೊಬೈಲ್‌ ತಯಾರಿಕೆಗೆ ಬೇಕಾಗುವ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ.

ಈ ಹಿನ್ನೆಲೆಯಲ್ಲಿ ಮೊಬೈಲ್‌ ಉತ್ಪಾದನೆ ಮಾಡುವ ಘಟಕಗಳ ಒಕ್ಕೂಟ ಅನಿವಾರ್ಯವಾಗಿ ಉತ್ಪಾದನೆ ಸ್ಥಗಿತಗೊಳಿಸಲೇಬೇಕಾಗಿದೆ ಎಂದು ಸರ್ಕಾರಕ್ಕೆ ಮನವರಿಕೆ ಮಾಡಿದೆ. ಜತೆಗೆ ಈ ಘಟಕಗಳಲ್ಲಿ ಇರುವ ಶೇ.90ರಷ್ಟು ಮಂದಿ ಚೀನ ಪರಿಣಿತರು ಕೂಡ ಸ್ವದೇಶಕ್ಕೆ ವಾಪಸಾಗಿದ್ದಾರೆ. ಇದು ದೇಶದ ವರ್ಚಸ್ಸಿಗೆ ಧಕ್ಕೆ ತರುವ ಅಂಶ ಮತ್ತು ಮುಂದಿನ ದಿನಗಳಲ್ಲಿ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತಿಕೂಲ ಪರಿಣಾಮಗಳನ್ನು ತಂದುಕೊಡಲಿದೆ ಎಂದು ಒಕ್ಕೂಟ ಭೀತಿ ವ್ಯಕ್ತಪಡಿಸಿದೆ.

ಪಾಕಿಸ್ತಾನದ ಸೆಂಟ್ರಲ್‌ ಬ್ಯಾಂಕ್‌ ಮೊಬೈಲ್‌ ಉತ್ಪಾದನಾ ಘಟಕಗಳ ಯಾವುದೇ ರೀತಿಯ ಕೋರಿಕೆಗಳನ್ನು ಪರಿಗಣಿಸದಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ ಎಂದು ಒಕ್ಕೂಟ ಅಲವತ್ತುತೊಂಡಿದೆ. ಇದೇ ವೇಳೆ, ಮಾರ್ಚ್‌ಗೆ ಸಂಬಂಧಿಸಿದಂತೆ ಆ ದೇಶದ ಹಣದುಬ್ಬರ ಶೇ.35.37ಕ್ಕೆ ಏರಿಕೆಯಾಗಿದೆ. ಐದು ದಶಕಗಳಿಗೆ ಹೋಲಿಕೆ ಮಾಡಿದರೆ ಇದು ಅತ್ಯಧಿಕವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next