Advertisement
ಹೀಗೆ ತಂತ್ರಗಾರಿಕೆ ಬದಲಾಯಿಸು ವುದರ ಹಿಂದೆ ಪಾಕಿಸ್ಥಾನಕ್ಕೆ ಎರಡು ಉದ್ದೇಶ ಗಳಿವೆ. ಕಣಿವೆಯಲ್ಲಿ ಇತ್ತೀ ಚಿಗೆ ಇಳಿಕೆಯಾ ಗಿದ್ದ ಭಯೋತ್ಪಾದನೆ ಇನ್ನೂ ಜೀವಂತ ವಾಗಿದೆ ಎಂಬುದರ ಬಗ್ಗೆ ಕಾಶ್ಮೀರಿ ಯುವಕರಿಗೆ ಸ್ಪಷ್ಟ ಸಂದೇಶ ರವಾನಿಸುವುದು ಹಾಗೂ ಅವ ರನ್ನು ಅದರತ್ತ ಆಕರ್ಷಿಸುವುದು ಎಂದು ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Related Articles
Advertisement
ಹಾಗಾಗಿಯೇ, ಅಲ್ಲಿ ಇತ್ತೀಚೆಗೆ ನಡೆದ ಉಗ್ರರ ದಾಳಿಗಳ ವೇಳೆ, ಅನ್ಯ ರಾಜ್ಯಗಳಿಂದ ಬಂದಿರುವ ಕೂಲಿಕಾರ್ಮಿ ಕರು, ಬೀದಿ ವ್ಯಾಪಾರಿಗಳನ್ನು ಕೊಲ್ಲಲಾಗಿದೆ. ಅ. 2ರಂದು ಶ್ರೀನಗರದ ಮುಖ್ಯ ಮಾರುಕಟ್ಟೆಯಲ್ಲಿ ಔಷಧ ಅಂಗಡಿ ಮಾಲಕ ಎಂ.ಎಲ್. ಬಿಂದ್ರೂ ಹಾಗೂ ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಕೊಂದಿದ್ದು, ರಾಷ್ಟ್ರಾದ್ಯಂತ ಇರುವ ಎಲ್ಲ ಮಾಧ್ಯಮಗಳಲ್ಲಿ ಪ್ರಕಟ ವಾಗಿತ್ತು. ಇದು ಸಹಜವಾಗಿಯೇ ದೇಶದ ಇತರ ಭಾಗಗಳಲ್ಲಿ ಭಯ ಬಿತ್ತಿದೆ. ಇದೇ ರೀತಿಯ ಭೀತಿ ಹೆಚ್ಚಾಗಬೇಕು ಎಂಬುದು ಪಾಕಿಸ್ಥಾನದ ಉದ್ದೇಶ. ಇದು ಸಾಲದೆಂಬಂತೆ ಮತ್ತಷ್ಟು ದಾಳಿಗಳನ್ನು ನಡೆಸಿರುವ ಅವರು ಇತ್ತೀಚೆಗೆ ಬಿಹಾರದಿಂದ ಬಂದಿದ್ದ ಕೂಲಿ ಕಾರ್ಮಿಕರನ್ನು ಕೊಂದಿದ್ದಾರೆ. ಇವೆೆಲ್ಲವೂ ಅನ್ಯ ರಾಜ್ಯಗಳ ಜನರು ಶಾಶ್ವತವಾಗಿ ನೆಲೆ ಯೂರಲು ಕಾಶ್ಮೀರಕ್ಕೆ ಬರದಂತೆ ತಡೆಯಲು ಮಾಡುತ್ತಿರುವ ಪ್ರಯತ್ನಗಳು’ ಎಂದು ಅವರು ತಿಳಿಸಿದ್ದಾರೆ.
ಇದಲ್ಲದೆ ಇತ್ತೀಚೆಗೆ ಕಣಿವೆಯಲ್ಲಿ ನಡೆದ ಗುಂಡಿನ ಚಕಮಕಿ ಪ್ರಕರಣಗಳಲ್ಲಿ ಹುತಾತ್ಮ ರಾದ ಭಾರತೀಯ ಯೋಧರ ಸಾವಿನ ಹಿಂದೆ ಪಾಕಿಸ್ಥಾನದಿಂದ ಗಡಿ ನಿಯಂತ್ರಣ ರೇಖೆಯ ಮೂಲಕ ಭಾರತದೊಳಕ್ಕೆ ನುಸುಳಿದ ಉಗ್ರರೇ ಕಾರಣ ಎಂಬುದಕ್ಕೆ ಅನೇಕ ಸಾಕ್ಷಿಗಳಿವೆ ಎಂದು ತಿಳಿಸಿದ್ದಾರೆ.
ಯುವಕರೇ ಅಪಾಯವಾಗುವ ಸಾಧ್ಯತೆಇದೇ ವೇಳೆ, ಜಮ್ಮು ಕಾಶ್ಮೀರದ ಸ್ಥಳೀಯ ಯುವಕರನ್ನು ಕಾಶ್ಮೀರ ಭಯೋತ್ಪಾದನೆಯತ್ತ ಆಕರ್ಷಿಸಲು ಪಾಕಿಸ್ಥಾನ ಇನ್ನಿಲ್ಲದ ಹೊಸ ಪ್ರಯತ್ನಗಳನ್ನು ಮಾಡುತ್ತದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಈಗಾಗಲೇ ಪಾಕಿಸ್ಥಾನದಲ್ಲಿ ಹೊಸ ಯುವಕರ ಸಂಘಟನೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಪಾಕಿಸ್ಥಾನ, ಮುಂದೆ ಅವರನ್ನು ಭಾರತದ ಶಕ್ತಿಶಾಲಿ ಉಗ್ರರನ್ನಾಗಿಸಲು ಯೋಜಿಸಿದೆ. ಹೀಗಾದರೆ ಮುಂದೆ ಈ ಯುವಕರೇ ಭಾರತದ ಪಾಲಿಗೆ ಅಪಾಯಕಾರಿಯಾಗಲಿದ್ದಾರೆ ಎಂದು ಇಲಾಖೆ ತಿಳಿಸಿದೆ.