Advertisement

ಶಂಕಿತ ಉಗ್ರನಿಗೆ ಪಾಕ್‌ನಿಂದ ಬಂದಿತ್ತು ಕರೆ!

12:36 AM Oct 07, 2021 | Team Udayavani |

ಮುಂಬಯಿ: ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಆರೋಪದಲ್ಲಿ ಕಳೆದ ತಿಂಗಳು ಮಹಾರಾಷ್ಟ್ರದ ಮುಂಬಯಿಯಲ್ಲಿ ಬಂಧಿಸಲಾಗಿದ್ದ ಜಾಕಿರ್‌ ಹುಸೇನ್‌ ಶೇಖ್‌ಗೆ ಪಾಕಿಸ್ಥಾನದಿಂದ ಕರೆ ಬಂದಿರುವುದು ದೃಢಪಟ್ಟಿದೆ ಎಂದು ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್‌) ತಿಳಿಸಿದೆ.

Advertisement

ಜಾಕಿರ್‌ನ ವಾಯ್ಸ ಓವರ್‌ ಇಂಟರ್‌ನೆಟ್‌ ಪ್ರೋಟೋಕಾಲ್‌ ಪರಿಶೀಲಿಸಿದಾಗ ಆತನಿಗೆ ಪಾಕಿಸ್ಥಾನದಿಂದ ಕರೆ ಬಂದಿರುವುದು ದೃಢವಾಗಿದೆ. ಅದು ಪಾಕಿಸ್ಥಾನದ ಸಂಖ್ಯೆಯಿಂದಲೇ ಬಂದಿರುವ ಕರೆಯೇ ಎನ್ನುವ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಆದರೆ ಅದರ ಐಪಿ ಅಡ್ರೆಸ್‌ ಪಾಕಿಸ್ಥಾನದಲ್ಲೇ ಇದೆ ಎಂದು ಎಟಿಎಸ್‌ ಮುಖ್ಯಸ್ಥ ವಿನೀತ್‌ ಅಗರ್ವಾಲ್‌ ತಿಳಿಸಿದ್ದಾರೆ.

ದಿಲ್ಲಿ ಪೊಲೀಸರು ಹಲವು ರಾಜ್ಯಗಳಲ್ಲಿ ಉಗ್ರರ ಜಾಲವೊಂದನ್ನು ಭೇದಿಸಿದ ಬೆನ್ನಲ್ಲೇ ಮುಂಬಯಿ ಎಟಿಎಸ್‌ ಅಧಿಕಾರಿಗಳು ಸೆ.17ರಂದು ಜಾಕಿರ್‌ನನ್ನು ಬಂಧಿಸಿದ್ದರು.

ಇದನ್ನೂ ಓದಿ:“ಸ್ವಾಮಿತ್ವದಿಂದ ಗ್ರಾಮೀಣ ಆರ್ಥಿಕತೆ ಅಭಿವೃದ್ಧಿ’

ಎಲ್‌ಟಿಟಿಇಗೆ ಶಸ್ತ್ರಾಸ್ತ್ರ ಸಾಗಣೆ: ಲಂಕಾ ಪ್ರಜೆ ಸೆರೆ
ಶ್ರೀಲಂಕಾದ ತಮಿಳು ಪ್ರತ್ಯೇಕತಾವಾದಿ ಗುಂಪಾಗಿರುವ ಎಲ್‌ಟಿಟಿಇಗೆ ಪಾಕಿಸ್ಥಾನದಿಂದ ಅಕ್ರಮವಾಗಿ ಶಸ್ತ್ರಾಸ್ತ್ರ ಸಾಗಾಟ ಮಾಡುತ್ತಿದ್ದ ಶ್ರೀಲಂಕಾ ಪ್ರಜೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ.  ಅಲಿಯಾಸ್‌ ಸುಬೇಸಾನ್‌ (47) ಬಂಧಿತ ವ್ಯಕ್ತಿ. ಈತ ಎಲ್‌ಟಿಟಿಇ ಗುಪ್ತಚರ ತಂಡದ ಮಾಜಿ ಸದಸ್ಯ. ಪಾಕ್‌ನಿಂದ ಶ್ರೀಲಂಕಾಕ್ಕೆ ಅಕ್ರಮವಾಗಿ ಶಸ್ತ್ರಾಸ್ತ್ರ ಸಾಗಾಟ ಮಾಡಿ, ಅಲ್ಲಿನ ಎಲ್‌ಟಿಟಿಇಯನ್ನು ಬಲಪಡಿಸುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಅಲ್ಲದೆ, ಆ ಸದಸ್ಯರಿಗೆ ಅಕ್ರಮವಾಗಿ ಡ್ರಗ್ಸ್‌ ಪೂರೈಕೆಯಲ್ಲೂ ಆತನ ಪಾಲಿರುವುದಾಗಿ ತಿಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next