Advertisement

ಕೋಳಿ ಮೇಲೆ ರೇಪ್‌: ಪಾಕ್‌ ಪಂಜಾಬ್‌ನ 14ರ ಹುಡುಗನ ಸೆರೆ

04:15 PM Nov 14, 2017 | udayavani editorial |

ಲಾಹೋರ್‌ : ಪಾಕಿಸ್ಥಾನದ ಪಂಜಾಬ್‌ ಪ್ರಾಂತ್ಯದಲ್ಲಿ 14 ವರ್ಷ ಪ್ರಾಯದ ಹುಡುಗನೋರ್ವ ಮನೆಯಲ್ಲಿ ನೆರೆ ಮನೆಯವರು ಸಾಕಿ ಹೆಣ್ಣು ಕೋಳಿಯನ್ನು ಅಪಹರಿಸಿ  ರೇಪ್‌ ಮಾಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.

Advertisement

ಲಾಹೋರ್‌ನಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಹಫೀಜಾಬಾದ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಜಲಪೂರ್‌ ಭಾತಿಯಾನ್‌ ಗ್ರಾಮದ ನಿವಾಸಿಯಾಗಿರುವ ಮನ್‌ಸಾಬ್‌ ಅಲಿ ಎಂಬಾತ ಪೊಲೀಸರಿಗೆ ದೂರು ನೀಡಿ ನೆರೆ ಮನೆಯ ಅನ್ಸಾರ್‌ ಹುಸೇನ್‌ ಕಳೆದ ನ.11ರಂದು ಅಪಹರಿಸಿ ಅದನ್ನು ರೇಪ್‌ ಮಾಡಿದ್ದ ಎಂದು ಹೇಳಿದ್ದರು. 

ಆರೋಪಿ ಅನ್ಸಾರ್‌ ಹುಸೇನ್‌ ರೇಪ್‌ ಕೃತ್ಯದಿಂದಾಗಿ ಕೋಳಿ ಸತ್ತು ಹೋಗಿತ್ತು. ರೇಪ್‌ ಕೃತ್ಯವನ್ನು ನಸ್ರುಲ್ಲಾ ಮತ್ತು ತುಫೇಲ್‌ ಎಂಬವರು ನೋಡಿದ್ದರು. ಅಂತೆಯೇ ಪ್ರತ್ಯಕ್ಷದರ್ಶಿಗಳ ಸಾಕ್ಷ್ಯ ಮತ್ತು ದೂರಿನ ಆಧಾರದಲ್ಲಿ ಪೊಲೀಸರು ಆರೋಪಿ ಅನ್ಸಾರ್‌ ಹುಸೇನ್‌ ನನ್ನು ಬಂಧಿಸಿದ್ದರು. 

ತಾನು ಕೋಳಿಯ ಮೇಲೆಸೆಗಿದ ಕೃತ್ಯ ನಿಜವೆಂದು ಒಪ್ಪಿಕೊಂಡ ಹುಸೇನ್‌, ಲೈಂಗಿಕ ಹತಾಶೆಯಿಂದ ತಾನು ಈ ಕೃತ್ಯ ಎಸಗಿದೆ ಎಂದು ಹೇಳಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next