Advertisement

New Year Celebration: ಪಾಕ್ ನಲ್ಲಿ ಈ ಬಾರಿ ಹೊಸ ವರ್ಷಾಚರಣೆಗೆ ಬ್ರೇಕ್… ಇದೆ ಕಾರಣವಂತೆ

09:23 AM Dec 29, 2023 | Team Udayavani |

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಈ ಬಾರಿ ಹೊಸ ವರ್ಷಾಚರಣೆ ಮಾಡುವುದಿಲ್ಲ ಎಂದು ನಿಯೋಜಿತ ಪ್ರಧಾನಿ ಘೋಷಣೆ ಮಾಡಿದ್ದಾರೆ.

Advertisement

ಕಾರಣ ಗಾಜಾದಲ್ಲಿರುವ ಜನರೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಲು ಪಾಕಿಸ್ತಾನದ ನಿಯೋಜಿತ ಪ್ರಧಾನಿ ಅನ್ವಾರುಲ್ ಹಕ್ ಕಾಕರ್ ಅವರು ಗುರುವಾರ ದೇಶದಲ್ಲಿ ಹೊಸ ವರ್ಷಾಚರಣೆಯನ್ನು ನಿಷೇಧಿಸುವುದಾಗಿ ಘೋಷಿಸಿದ್ದಾರೆ.

ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಸಂಕ್ಷಿಪ್ತ ಭಾಷಣದಲ್ಲಿ ಕಾಕರ್ ಅವರು ಪ್ಯಾಲೆಸ್ಟೀನಿಯಾದವರಿಗೆ ಒಗ್ಗಟ್ಟನ್ನು ತೋರಿಸಲು ಮತ್ತು ಹೊಸ ವರ್ಷದಲ್ಲಿ ಸಮಚಿತ್ತತೆ ಮತ್ತು ನಮ್ರತೆಯನ್ನು ಪ್ರದರ್ಶಿಸಲು ದೇಶದ ಜನರಲ್ಲಿ ಒತ್ತಾಯಿಸಿದ್ದಾರೆ.

“ಪ್ಯಾಲೆಸ್ತೀನ್‌ನಲ್ಲಿನ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ನಮ್ಮ ಪ್ಯಾಲೆಸ್ತೀನ್ ಸಹೋದರ ಸಹೋದರಿಯರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು, ಹೊಸ ವರ್ಷಕ್ಕೆ ಯಾವುದೇ ರೀತಿಯ ಕಾರ್ಯಕ್ರಮಗಳನ್ನು ನಡೆಸದಂತೆ ಸರ್ಕಾರವು ಕಟ್ಟುನಿಟ್ಟಾದ ನಿಷೇಧವನ್ನು ವಿಧಿಸುತ್ತದೆ” ಎಂದು ಅವರು ಹೇಳಿದರು.

ಅಕ್ಟೋಬರ್ 7 ರಂದು ಇಸ್ರೇಲಿ ಬಾಂಬ್ ದಾಳಿ ಪ್ರಾರಂಭವಾದಾಗಿನಿಂದ ಸುಮಾರು 9,000 ಮಕ್ಕಳು ಸೇರಿದಂತೆ ಇಸ್ರೇಲ್ ಪಡೆಯ ಹಿಂಸಾಚಾರದಲ್ಲಿ ಇದುವರೆಗೆ 21,000 ಪ್ಯಾಲೆಸ್ಟೀನಿಯನ್ನರು ಕೊಲ್ಲಲ್ಪಟ್ಟಿದ್ದಾರೆ ಎಂದು ಅವರು ಹೇಳಿದರು.

Advertisement

“ಇಡೀ ಪಾಕಿಸ್ತಾನಿ ರಾಷ್ಟ್ರ ಮತ್ತು ಮುಸ್ಲಿಂ ಜಗತ್ತು ಗಾಜಾ ಮತ್ತು ಪಶ್ಚಿಮ ಪ್ರದೇಶದಲ್ಲಿರುವ ಮುಗ್ಧ ಮಕ್ಕಳ ಹತ್ಯಾಕಾಂಡದಲ್ಲಿ ಪ್ಯಾಲೆಸ್ಟೀನಿಯನ್ನರ ನರಮೇಧದ ಬಗ್ಗೆ ದುಃಖದಲ್ಲಿದೆ. ಎಂದು ಹೇಳಿದರು” ಹೀಗಿರುವಾಗ ನಾವು ಹೊಸ ವರ್ಷಾಚರಣೆ ಮಾಡುವುದು ಸರಿಯಲ್ಲ ಎಂಬ ಕಾರಣದಿಂದ ನಿಷೇಧ ಹೇರಿದ್ದಾಗಿ ಅಲ್ಲದೆ ದೇಶದ ಜನರು ಇದಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Ayodhya ನೂತನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ಮಹರ್ಷಿ ವಾಲ್ಮೀಕಿ’ ಹೆಸರಿಡಲು ನಿರ್ಧಾರ

Advertisement

Udayavani is now on Telegram. Click here to join our channel and stay updated with the latest news.

Next