Advertisement

ಉಗ್ರ ಮಸೂದ್‌ ಅಜರ್‌ ಪುತ್ರ,ಸಹೋದರನ ಬಂಧಿಸಿದ ಪಾಕಿಸ್ಥಾನ!

12:24 PM Mar 05, 2019 | Team Udayavani |

ಇಸ್ಲಮಾಬಾದ್‌ : ಪುಲ್ವಾಮಾ ಭೀಕರ ಉಗ್ರದಾಳಿಗೆ ಕಾರಣವಾದ ನಿಷೇಧಿತ ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ವಿರುದ್ಧ ಜಾಗತಿಕ ಮಟ್ಟದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದುದನ್ನು  ಗಮನಿಸಿದ ಪಾಕಿಸ್ಥಾನ, ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌‌ನ ಸಹೋದರ ಮತ್ತು ಪುತ್ರನನ್ನು ಬಂಧಿಸಿದೆ. 

Advertisement

ಮಸೂದ್‌ ಸಹೋದರನಾಗಿರುವ ಮುಫ್ತಿ ರೌಫ್ ಅಸ್ಘರ್‌, ಪುತ್ರ ಹಂಝ ಅಜರ್‌ ಅವರನ್ನು ಮಂಗಳವಾರ ಪಾಕ್‌ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ. 

ಪಾಕ್‌ನ ಆಂತರಿಕ ವ್ಯವಹಾರಗಳ ರಾಜ್ಯ ಖಾತೆ ಸಚಿವ ಶಹರ್‌ಯಾರ್‌ ಅಫ್ರಿದಿ ಅವರು ಇಬ್ಬರ ಬಂಧನವನ್ನು ಖಚಿತ ಪಡಿಸಿದ್ದು, ಮಾತ್ರವಲ್ಲದೆ ಪುಲ್ವಮಾ ದಾಳಿಗೆ ಸಂಬಂಧಿಸಿ ಇದುವರೆಗೆ 44 ಮಂದಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. 

ಪಾಕ್‌ ಭಾರತದ ಒತ್ತಡ ಮತ್ತು ಜಾಗತಿಕ ನಾಯಕರ ಪ್ರಶ್ನೆಗಳಿಗೆ ಸಿಲುಕಿ ಜೆಇಎಂನ 2 ನೇ ಪ್ರಮುಖನಾಗಿರುವ ರೌಫ್ ಅಸ್ಘರ್‌ನನ್ನು ಬಂಧಿಸಿರುವುದು ಸ್ಪಷ್ಟವಾಗಿದೆ. 

ಹಲವು ರಾಷ್ಟ್ರಗಳು ಜೆಇಎಂ ವಿರುದ್ಧ ಕ್ರಮಕೈಗೊಳ್ಳುವಂತೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಮಣಿದ ಪಾಕ್‌ ಈ ಕ್ರಮ ಕೈಗೊಂಡು ಬಿಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಿದೆ. 

Advertisement

ಫೆಬ್ರವರಿ 14 ರ ಪುಲ್ವಮಾ ದಾಳಿಯಲ್ಲಿ ರೌಫ್ ಮತ್ತು ಅಸ್ಘರ್‌ ಪ್ರಮುಖ ಪಾತ್ರ ವಹಿಸಿದ್ದರು ಎನ್ನುವುದು ಸ್ಪಷ್ಟವಾಗಿತ್ತು. 

ನರಿ ಬುದ್ದಿ ? 
ಅಂದ ಹಾಗೆ, ಬಂಧಿತರ ವಿರುದ್ಧ ಯಾವುದೇ ಆರೋಪಗಳಿಗೆ ಸಾಕ್ಷ್ಯ ದೊರಕದಿದ್ದರೆ, ಅವರೆಲ್ಲರನ್ನೂ ಬಿಡುಗಡೆ ಮಾಡುವುದಾಗಿ ಆಂತರಿಕ ಸಚಿವಾಲಯದ ಕಾರ್ಯದರ್ಶಿ ಹೇಳಿದ್ದಾರೆ. 

ಇದೇ ವೇಳೆ ನಾವು ಭಾರತದ ಒತ್ತಡಕ್ಕಾಗಲಿ, ಜಾಗತಿಕ ಒತ್ತಡಕ್ಕಾಗಿ ಇವರನ್ನು ಬಂಧಿಸಿಲ್ಲ. ನಾವು ನಮ್ಮ ರಾಷ್ಟ್ರೀಯ ಕಾರ್ಯ ಯೋಜನೆ ಸಮಿತಿಯ ನಿರ್ಧಾರದಂತೆ ಈ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next