Advertisement

ಸೇನಾ ವೆಚ್ಚ ತಗ್ಗಿಸಲು ಪಾಕ್‌ ಸೇನೆ ಚಿಂತನೆ

01:10 AM Jun 06, 2019 | Team Udayavani |

ಇಸ್ಲಾಮಾಬಾದ್‌: ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ಥಾನಕ್ಕೆ ಈಗ ರಕ್ಷಣಾ ವೆಚ್ಚ ತಗ್ಗಿಸುವ ಅನಿವಾರ್ಯತೆ ಉಂಟಾಗಿದೆ. ಈ ಬಗ್ಗೆ ಖುದ್ದು ಭಾರತದ ನೆರೆಯ ರಾಷ್ಟ್ರದ ಸೇನೆಯೇ ನಿರ್ಧಾರಕ್ಕೆ ಬಂದಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸೇನೆಯ ಮಾಧ್ಯಮ ವಿಭಾಗದ ಮಹಾ ನಿರ್ದೇಶಕ ಮೇ|ಜ| ಆಸಿಫ್ ಗಫ‌ೂರ್‌ ‘ಮುಂದಿನ ವಿತ್ತ ವರ್ಷಕ್ಕಾಗಿ ಸೇನೆಯ ವೆಚ್ಚ ತಗ್ಗಿಸಲು ತೀರ್ಮಾನಿಸಲಾಗಿದೆ. ಆದರೆ ದೇಶದ ಹಿತಾಸಕ್ತಿ ಬಲಿಕೊಡುವುದಿಲ್ಲ. ಸಂಭಾವ್ಯ ಬೆದರಿಕೆ ಎದುರಿಸಲು ಬೇಕಾಗಿರುವ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಳ್ಳುತ್ತೇವೆ’ ಎಂದು ಬರೆದುಕೊಂಡಿದ್ದಾರೆ.

Advertisement

ಎಷ್ಟು ಮೊತ್ತವನ್ನು ಕಡಿಮೆ ಮಾಡಿಕೊಳ್ಳಲಾಗಿದೆ ಎಂಬ ಅಂಶವನ್ನು ಗಫ‌ೂರ್‌ ಪ್ರಸ್ತಾಪ ಮಾಡಿಲ್ಲ. ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌ ಸೇನೆಯ ನಿರ್ಧಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಉಳಿತಾಯವಾಗುವ ಮೊತ್ತವನ್ನು ಬಲೂಚಿಸ್ಥಾನದ ಅಭಿವೃದ್ಧಿಗೆ ಬಳಕೆ ಮಾಡಲಾಗುವುದು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next