Advertisement

ರಾ ಮಾಜಿ ಮುಖ್ಯಸ್ಥನ ಜತೆಗೆ ಪುಸ್ತಕ ಬರೆದ ಐಎಸ್‌ಐ ಮಾಜಿಗೆ ಸಮನ್ಸ್‌

12:13 PM May 26, 2018 | Team Udayavani |

ಇಸ್ಲಾಮಾಬಾದ್‌ : ಭಾರತೀಯ ಗುಪ್ತಚರ ಸಂಸ್ಥೆ “ರಾ” ಇದರ ಮಾಜಿ ಮುಖ್ಯಸ್ಥ ಎ ಎಸ್‌ ದುಲಾತ್‌ ಅವರೊಂದಿಗೆ ಸಹ-ಲೇಖಕರಾಗಿ ಪುಸ್ತಕ ಬರೆದಿರುವ ಮಾಜಿ ಪಾಕ್‌ ಐಎಸ್‌ಐ ಮುಖ್ಯಸ್ಥ ಅಸಾದ್‌ ದುರಾನಿ ಅವರನ್ನು “ಸೇನಾ ನೀತಿ ಸಂಹಿತೆಯ ಉಲ್ಲಂಘನೆ” ಗಾಗಿ ಪ್ರಶ್ನಿಸಲು ಐಎಸ್‌ಐ ಕರೆಸಿಕೊಂಡಿದೆ.

Advertisement

“ದ ಸ್ಪೈ ಕ್ರೋನಿಕಲ್‌ಸ್‌ :  ರಾ, ಐಎಸ್‌ಐ ಆ್ಯಂಡ್‌ ದ ಇಲ್ಯುಶನ್‌ ಆಫ್ ಪೀಸ್‌’ ಎಂಬ ಪುಸ್ತಕವನ್ನು ದುಲಾತ್‌ ಅವರೊಂದಿಗ ಸಹ-ಲೇಖಕರಾಗಿ ಬರೆದಿರುವ ಲೆ| ಜನರಲ್‌ ದುರಾನಿ ಅವರು 1990ರ ಆಗಸ್ಟ್‌ ನಿಂದ 1992ರ ಮಾರ್ಚ್‌ ವರೆಗೆ ಐಎಸ್‌ಐ ಮುಖ್ಯಸ್ಥರಾಗಿದ್ದರು. ಇವರ ಪುಸ್ತಕವನ್ನು ಮೊನ್ನೆ ಬುಧವಾರ ಬಿಡುಗಡೆ ಮಾಡಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next