Advertisement

ಪೇಶಾವರದ ವಸ್ತು ಸಂಗ್ರಹಾಲಯಕ್ಕೆ ಬುದ್ಧನ ಪ್ರತಿಮೆ ಉಡುಗೊರೆ ನೀಡಿದ ಪಾಕ್‌ ಸೇನೆ

10:34 PM Jul 04, 2021 | Team Udayavani |

ಪೇಶಾವರ್‌: ಪಾಕಿಸ್ತಾನದ ಸೇನೆ ಪೇಶಾವರದ ವಸ್ತು ಸಂಗ್ರಹಾಲಯಕ್ಕೆ ಬುದ್ಧನ ಅಪರೂಪದ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದೆ.

Advertisement

ಈ ಮೂಲಕ ಖೈಬರ್‌ ಪಕ್ತುಂಖ್ವಾದಲ್ಲಿ ಧಾರ್ಮಿಕ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಅಲ್ಲಿನ ಸೇನೆ ನೆರವಾಗಿದೆ. ಈ ಪ್ರತಿಮೆಯನ್ನು 1935 ರಲ್ಲಿ ಬ್ರಿಟಿಷ್‌ ಮೇಜರ್‌ ನಿಂದ ತಖ್ತ್ ಭಾಯ್‌ನಲ್ಲಿ ಉತ್ಖನನದ ವೇಳೆ ವಶಪಡಿಸಿಕೊಳ್ಳಲಾಗಿತ್ತು.

ಖೈಬರ್‌ ಪಕ್ತುಂಖ್ವಾದ ಹಳೇ ಹೆಸರು ಗಾಂಧಾರ. ಆ ಸ್ಥಳ ಬೌದ್ಧರ ಪವಿತ್ರ ಸ್ಥಳವಾಗಿದೆ. ಪ್ರತಿವರ್ಷ ವಿವಿಧ ದೇಶಗಳ ಬೌದ್ಧ ಬಿಕ್ಕುಗಳು ಅಲ್ಲಿಗೆ ಆಗಮಿಸುತ್ತಾರೆ. ಬುದ್ಧ ವಿಗ್ರಹಗಳ ವಿಶೇಷ ಸಂಗ್ರಹವಿರುವ ಪ್ರಪಂಚದ ದೊಡ್ಡ ವಸ್ತುಸಂಗ್ರಹಾಲಯಗಳಲ್ಲಿ ಪೇಶಾವರ್‌ ಮ್ಯೂಸಿಯಂ ಕೂಡ ಒಂದಾಗಿದೆ.

ಇದನ್ನೂ ಓದಿ : ಕೇರಳಕ್ಕೆ ಸಿಗಲಿದೆ ಡ್ರೋನ್‌ ಲ್ಯಾಬ್‌ : ಡ್ರೋನ್‌ ನಿಯಂತ್ರಣ ವ್ಯವಸ್ಥೆ ಅಭಿವೃದ್ಧಿಗೂ ಚಿಂತನೆ

Advertisement

Udayavani is now on Telegram. Click here to join our channel and stay updated with the latest news.

Next