Advertisement

ಪಾಕ್‌ ದಾಳಿ: ಯೋಧ ಹುತಾತ್ಮ

08:45 AM Jan 19, 2018 | Team Udayavani |

ಶ್ರೀನಗರ: ಜಮ್ಮುವಿನಲ್ಲಿ ವಿವಿಧ ಪ್ರದೇಶಗಳಲ್ಲಿ ಪಾಕಿಸ್ಥಾನದ ಸೇನಾ ಪಡೆಗಳು ಬುಧವಾರ ರಾತ್ರಿಯಿಡೀ ನಡೆಸಿದ ಅಪ್ರಚೋದಿತ ಶೆಲ್‌ ದಾಳಿಯಲ್ಲಿ ಬಿಎಸ್‌ಎಫ್ ಯೋಧರೊಬ್ಬರು ಹುತಾತ್ಮರಾದರೆ, 17 ವರ್ಷದ ಯುವತಿಯೊಬ್ಬಳು ಮೃತಪಟ್ಟಿದ್ದಾರೆ. ಅಲ್ಲದೆ, ಇತರ ಆರು ಜನ ಗಾಯಗೊಂಡಿದ್ದಾರೆ.

Advertisement

ಆರ್‌ಎಸ್‌ ಪುರ, ಅರ್ನಿಯಾ ಮತ್ತು ರಾಮಗಢದಲ್ಲಿನ ಸೇನಾ ನೆಲೆಗಳ ಮೇಲೆ ಪಾಕ್‌ ಯೋಧರು ಬುಧವಾರ ತಡರಾತ್ರಿ ಹಠಾತ್‌ ದಾಳಿ ನಡೆಸಿದ್ದಾರೆ. ದಾಳಿ ಬೆಳಗ್ಗೆ ಆರು ಗಂಟೆಯವರೆಗೂ ನಿರಂತರವಾಗಿ ಮುಂದು ವರಿದಿತ್ತು. ಅನಂತರವೂ ಆಗಾಗ್ಗೆ ಗಡಿ ಯಾ  ಚೆ ಗಿಂದ ಗುಂಡಿನ ದಾಳಿ ನಡೆಸಲಾ ಗಿದೆ ಎಂದು ಬಿಎಸ್‌ಎಫ್ ಮೂಲಗಳು ತಿಳಿಸಿವೆ. ಸುಮಾರು 20 ಹಳ್ಳಿಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಪರೀತ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಯುತ್ತಿರುವುದರಿಂದ ಈ ಭಾಗದ ಬಿಎಸ್‌ಎಫ್ ಯೋಧರಿಗೆ ಅತೀವ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next