Advertisement

ವಿಜೃಂಭಣೆಯ ಪೈವಳಿಕೆ ಕಂಬಳ ಸಂಪನ್ನ 

12:27 PM Dec 16, 2018 | |

ಕುಂಬಳೆ: ಕೊನೆಯ ಕ್ಷಣದ ಕಾನೂನು ರೀತಿಯ ಸಮಸ್ಯೆಗಳನ್ನು ನಿವಾರಿಸಿಕೊಂಡು ಮೊದಲ ಬಾರಿಗೆ ನಡೆದ  ಪೈವಳಿಕೆ ಅಣ್ಣ ತಮ್ಮ ಜೋಡುಕರೆ ಕಂಬಳ ವಿಜೃಂಭಣೆಯಿಂದ ರವಿವಾರ ಬೆಳಗ್ಗೆ ಸಂಪನ್ನವಾಯಿತು.

Advertisement

ಮೊದಲ ಬಾರಿಗೆ ನಡೆದ ಪೈವಳಿಕೆ ಕಂಬಳ ಕೂಟದಲ್ಲಿ ಕನೆ ಹಲಗೆ 4  ಜೊತೆ, ಅಡ್ಡ ಹಲಗೆ 4  ಜೊತೆ, ಹಗ್ಗ ಹಿರಿಯ 17 ಜೊತೆ, ನೇಗಿಲು ಹಿರಿಯ 16 ಜೊತೆ, ಹಗ್ಗ ಕಿರಿಯ 13 ಜೊತೆ, ನೇಗಿಲು ಕಿರಿಯ 34  ಜೊತೆ ಸೇರಿದಂತೆ ಒಟ್ಟು 88 ಜೊತೆ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಕಂಬಳ ಇತಿಹಾಸದಲ್ಲಿ ಮೊದಲ ಬಾರಿಗೆ ಸೆಮಿ ಫೈನಲ್ ಹಂತಕ್ಕೆ ತಲುಪಿದವರಿಗೆ ಕೂಡಾ ಪ್ರಶಸ್ತಿ ನೀಡಲಾಯಿತು. 

ಫಲಿತಾಂಶ: 
ಕನೆಹಲಗೆ
ಪ್ರಥಮ: ಬೇಲಾಡಿ ಬಾವ ಅಶೋಕ್ ಶೆಟ್ಟಿ
ಹಲಗೆ ಮೆಟ್ಟಿದವರು: ನಾರಾವಿ ಯುವರಾಜ್ ಜೈನ್ 
ದ್ವಿತೀಯ: ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ
ಹಲಗೆ ಮೆಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ

ಹಗ್ಗ ಹಿರಿಯ
ಪ್ರಥಮ: ಕೂಳೂರು ಪೊಯ್ಯೆಲು ಪಿ.ಆರ್.ಶೆಟ್ಟಿ “A”
ಓಡಿಸಿದವರು: ಮಾರ್ನಾಡ್ ರಾಜೇಶ್
ದ್ವಿತೀಯ: ಕೂಳೂರು ಪೊಯ್ಯೆಲು ಪಿ.ಆರ್.ಶೆಟ್ಟಿ “B”
ಓಡಿಸಿದವರು: ಅಳದಂಗಡಿ ರವಿ ಕುಮಾರ್ 

ಹಗ್ಗ ಕಿರಿಯ
ಪ್ರಥಮ: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ “A”
ಓಡಿಸಿದವರು: ಮಾರ್ನಾಡ್ ರಾಜೇಶ್
ದ್ವಿತೀಯ:ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ “B”
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ 

Advertisement


ನೇಗಿಲು ಹಿರಿಯ

ಪ್ರಥಮ: ಇರುವೈಲು ಪಾನಿಲ ಬಾಡ ಪೂಜಾರಿ
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ 
ದ್ವಿತೀಯ: ಬೋಳದ ಗುತ್ತು ಸತೀಶ್ ಶೆಟ್ಟಿ “A”
ಓಡಿಸಿದವರು: ಹೊಕ್ಕಾಡಿಗೋಳಿ ಸುರೇಶ್ ಶೆಟ್ಟಿ 

ನೇಗಿಲು ಕಿರಿಯ
ಪ್ರಥಮ: ಗೊಳ್ತಮಜಲ್ ಆಸೀಫ್ ಸಾಹೇಬ್ “ಬಿ”
ಓಡಿಸಿದವರು: ಅತ್ತೂರು  ಕೊಡಂಗೆ ಸುಧೀರ್  
ದ್ವಿತೀಯ: ಮುಂಡ್ಕೂರು ಮುಲ್ಲಡ್ಕ ರವೀಂದ್ರ ಶೆಟ್ಟಿ “ಬಿ” 
ಓಡಿಸಿದವರು:ಕಡಂದಲೆ ದುರ್ಗಾ ಪ್ರಸಾದ

ಅಡ್ಡಹಲಗೆ 
ಪ್ರಥಮ: ಮೇರಮಜಲ್ ಮಿಷನ್ ಗೋಡ್ವಿನ್ ವೆಲ್ವಿನ್ ವಾಸ್
ಹಲಗೆ ಮೆಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ  
ದ್ವಿತೀಯ: ಹಂಕರಜಾಲು ಮೋಹನದಾಸ್ ಭಿರ್ಮಣ್ಣ ಶೆಟ್ಟಿ
ಹಲಗೆ ಮೆಟ್ಟಿದವರು: ನಾರಾವಿ ಯುವರಾಜ್ ಜೈನ್ 

ಚಿತ್ರ ಕೃಪೆ : ಶ್ರವಣ್ 

Advertisement

Udayavani is now on Telegram. Click here to join our channel and stay updated with the latest news.

Next