Advertisement

ಚಿತ್ರಕಲೆ ಹೊಸ ಪ್ರಯೋಗಗಳಿಗೆ ಪ್ರೇರಣೆ

12:30 PM Oct 26, 2018 | |

ಬೆಂಗಳೂರು: ಸಂಗೀತ ಹಾಗೂ ಚಿತ್ರಕಲೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವಿಭಿನ್ನ ರೀತಿಯ ಕಲಾಕೃತಿಗಳು, ರಾಗ ಸಂಯೋಜಕರ ಹೊಸ ಪ್ರಯೋಗಗಳಿಗೆ ಪ್ರೇರಣೆ ನೀಡಿರುವ ಉದಾಹರಣೆಗಳಿವೆ ಎಂದು ಕರ್ನಾಟಕ ಸಂಗೀತ ಅಕಾಡೆಮಿ ಅಧ್ಯಕ್ಷ ಪಂಡಿತ್‌ ಫ‌ಯಾಜ್‌ಖಾನ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಕರ್ನಾಟಕ ಲಲಿತಕಲಾ ಅಕಾಡೆಮಿ ಕನ್ನಡ ಭವನದ ವರ್ಣ ಆರ್ಟ್‌ ಗ್ಯಾಲರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಿಂಗಳ ಚಿತ್ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವರ ಕವಿ ದ.ರಾ.ಬೇಂದ್ರೆ ಅವರ ಕವನಗಳ ಓದು, ನನ್ನಲ್ಲಿ ಹೊಸ ಸಂಗೀತ ಹುಟ್ಟಿಗೆ ಕಾರಣವಾಗಿವೆ. ಹೀಗಾಗಿ ಯುವ ಚಿತ್ರಕಲಾವಿದರು ಸಾಹಿತ್ಯವನ್ನು ಓದಬೇಕು. ಸಾಹಿತ್ಯ ಓದುವುದರಿಂದ ಚಿತ್ರಕಲೆಗೆ ಸಂಬಂಧಿಸಿದ ಹೊಳವು ಸಿಗಲಿವೆ ಎಂದು ಹೇಳಿದರು.

ಗ್ರಾಮೀಣ ಮಟ್ಟದಲ್ಲಿ ಪ್ರತಿಭಾವಂತರಿದ್ದಾರೆ: ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷೆ ಪ್ರೊ.ಎಂ.ಜೆ.ಕಮಲಾಕ್ಷಿ ಮಾತನಾಡಿ, ಹಳ್ಳಿಗಳಲ್ಲಿ ಹಲವಾರು ಪ್ರತಿಭಾವಂತ ಯುವ ಕಲಾವಿದರಿದ್ದಾರೆ. ಆದರೆ ಅವರಿಗೆ ಸೂಕ್ತ ವೇದಿಕೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಕಾಡೆಮಿ ಭವಿಷ್ಯದ ತಾರೆಗಳಿಗೆ ವೇದಿಕೆ ಕಲ್ಪಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕಲಾವಿದರಿಗೆ ಅನುಕೂಲವಾಗುವ ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದರು.

ಯುವ ಕಲಾವಿದರ ಪರವಾಗಿ ಮಾತನಾಡಿದ ಬೀದರ್‌ನ ಕವಿತಾ, ಗ್ರಾಮೀಣ ಮಟ್ಟದಲ್ಲಿರುವ ನನ್ನಂತಹ ಹಲವು ಕಲಾವಿದರಿಗೆ ಲಲಿತ ಕಲಾಅಕಾಡೆಮಿ ವೇದಿಕೆ ಕೊಟ್ಟಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು. ಅಕಾಡೆಮಿ ರಿಜಿಸ್ಟ್ರಾರ್‌ ಇಂದ್ರಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಅ.27ರ ವರೆಗೆ ವಿವಿಧ ಕಲಾವಿದರ ಕಲಾಕೃತಿಗಳು ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next