Advertisement
ಹೌದು, ಈ ಪೈಂಟ್ ಎಂಜಿನಿಯರ್ ನಾವೂ ಕೂಡ ಆಗಬಹುದು. ಕೆಲವು ಕೋರ್ಸ್‌ಗಳ ಮುಖಾಂತರ ಬಣ್ಣಗಳು, ಪೈಂಟ್ ಹೀಗೆ ಹಲವು ವಿಷಯಗಳನ್ನು ಕಲಿಯುವ ಮುಖಾಂತರ ನಮ್ಮ ದೃಷ್ಟಿಕೋನ ಬದಲಾಗುತ್ತದೆ. ಜತೆಗೆ ಇಂಟೀರಿಯಲ್ ಡಿಸೈನ್‌ಗಳನ್ನು ಕಲಿತರೆ ಮನೆಯು ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಬಹುದು.
ಈ ಕೋರ್ಸ್ ಗಳಲ್ಲಿ ಡಿಪ್ಲೋಮಾ ಅಥವಾ ಪದವಿಯನ್ನೂ ಹೊಂದಬಹುದು. ಇದರಿಂದ ಮುಂದೆ ಪ್ರತಿಷ್ಠಿತ ಪೈಂಟ್ ಕಂಪೆನಿಗಳಲ್ಲಿ ಕೆಲಸ ನಿರ್ವಹಿಸಬಹುದು. ಎಂಜಿನಿಯರ್ ಆಗಬಹುದು; ಅಥವಾ ಸ್ವಂತ ಉದ್ಯಮವನ್ನು ಆರಂಭಿಸುವ ಹಲವು ಅವಕಾಶಗಳು ಲಭಿಸುತ್ತದೆ. ಮಾತ್ರವಲ್ಲದೆ ವಿದೇಶಗಳಲ್ಲಿ ಈ ಪದವಿಧರರಿಗೆ ಉತ್ತಮ ಅವಕಾಶಗಳು ಇವೆ. ಅಟೊಮೊಬೈಲ್ ಕಂಪೆನಿ, ಸಿವಿಲ್ ಕಾಂಟ್ರಾಕ್ಟರ್, ಏರ್‌ಕ್ರಾಫ್ಟ್ ಮ್ಯಾನಿಫ್ಯಾಕ್ಚರಿಂಗ್ ಕಂಪೆನಿಗಳಲ್ಲೂ ಕೆಲಸ ಪಡೆಯಬಹುದು. ಈಗ ಪ್ರತಿಯೊಬ್ಬರು ತಮ್ಮ ಕನಸಿನ ಮನೆಗಳನ್ನು ನಿರ್ಮಿಸುತ್ತಿದ್ದಾರೆ. ಹಾಗಾಗಿ ಪರಿಪೂರ್ಣ ವ್ಯವಸ್ಥೆಯನ್ನು ಅವರು ಬಯಸುತ್ತಾರೆ. ಅದರಂತೆಯೇ ಪೈಂಟ್ ಎಂಜಿನಿಯರ್‌ಗಳು ಮನೆಗೆ ಸೂಕ್ತವೆನಿಸುವ ಹಾಗೂ ಉತ್ತಮ ಗುಣಮಟ್ಟದ ಪೈಂಟ್ ಹಾಗೂ ಕಲರ್‌ಗಳನ್ನು ತಿಳಿಸುವುದು. ಹೊಸ ಮಾದರಿಯ ಕಲರ್‌ಗಳು ಹಾಗೂ ಟ್ರೆಂಡಿಂಗ್‌ನಲ್ಲಿರುವ ಬಣ್ಣಗಳ ಪರಿಚಯಿಸುವುದು.
Related Articles
Advertisement
ಪೈಂಟ್ ಎಂಜಿನಿಯರ್ ಎಂದಾಕ್ಷಣ ಎಲ್ಲರೂ ಮನೆ ಅಥವಾ ಕಟ್ಟಡದ ಗೋಡೆಗೆ ಬಣ್ಣ ಬಳಿಯುವ ಕಾರ್ಯ ಮಾತ್ರವಲ್ಲದೆ ಅಟೋಮೊಬೈಲ್, ಏರ್‌ಕ್ರಾಫ್ಟ್, ಪೈಂಟ್ ಮ್ಯಾನಿಫ್ಯಾಕ್ಚರಿಂಗ್, ಕೆಮಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಶನ್, ಹೀಗೆ ಎಲ್ಲವನ್ನೂ ಇದು ಒಳಗೊಂಡ ಕ್ಷೇತ್ರವಾಗಿದೆ.
ಪ್ರತಿಯೊಬ್ಬರು ಬೇರೆ ಬೇರೆ ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಮಾಡಿದರೆ ಇಂತಹ ವಿಭಿನ್ನವಾದುದನ್ನು ಕಲಿತರೆ ಹೊಸ ಬದಲಾವಣೆ ಜತೆಗೆ ವೃತ್ತಿಯನ್ನು ನಿರ್ವಹಿಸಬಹುದು. ಅಥವಾ ಡಿಪ್ಲೋಮಾ ಕೋರ್ಸ್ ಗಳನ್ನು ಮಾಡಿದರೆ ಇತರ ಕೆಲಸದ ಜತೆಗೆ ಇದನ್ನೂ ಪಾರ್ಟ್ ಟೈಮ್ ಆಗಿ ಕೆಲಸ ನಿರ್ವಹಿಸಬಹುದು.
ಹಲವು ಕೋರ್ಸ್ಬಿ.ಟೆಕ್ ಇನ್ ಪೈಂಟ್ ಟೆಕ್ನಾಲಜಿ, ಡಿಪ್ಲೋಮಾ ಇನ್ ಪೈಂಟ್ ಅಪ್ಲಿಕೇಶನ್, ಪೈಂಟ್ ಆ್ಯಂಡ್ ವರ್ನಿಶ್ ಟೆಕ್ನಾಲಜಿ, ಬಿ.ಇ. ಇನ್ ಕೆಮಿಕಲ್ ಎಂಜಿನಿಯರಿಂಗ್, ಸರ್ಫೇಸ್ ಕೋಟಿಂಗ್ ಟೆಕ್ನಾಲಜಿ, ಪೈಂಟ್ ಆ್ಯಂಡ್ ಕೋಟಿಂಗ್ ಟೆಕ್ನಾಲಜಿ ಹೀಗೆ ಹಲವು ಕೋರ್ಸ್ ಗಳು, ಎಂಜಿನಿಯರಿಂಗ್ ಹಾಗೂ ಡಿಪ್ಲೋಮಾಗಳು ಇವೆ. ಭರತ್ ರಾಜ್, ಕರ್ತಡ್ಕ