Advertisement
ಸೋದರ ಮಾವಂದಿರಿಂದ ಮದ್ದಳೆ, ಭಾಗವತಿಕೆಗೆ ಶ್ರೀಕಾರ. ಗುರು ಮಾಂಬಾಡಿ ನಾರಾಯಣ ಭಾಗವತರಿಂದ ಶಿಲ್ಪಕ್ಕೆ ಆಕಾರ. ಯಾರದ್ದೇ ಪ್ರತಿಯಾಗದ ಭಾಗವತಿಕೆ. ಪ್ರತ್ಯೇಕವಾದ ತೆಂಕಬೈಲು ಮಟ್ಟಿನ ಜನಸ್ವೀಕೃತಿ.ಭಾಗವತರಾದ ಬಳಿಕ ಬದುಕಿಗೆ ಹೊಸ ತಿರುವು. ಕೂಟ, ಆಟಗಳಿಗೆ ಬೇಡಿಕೆ. ನಿಜಾರ್ಥದ ರಂಗನಿರ್ದೇಶಕನಾಗಿ ಬಿಡುವಿರದ ದುಡಿತ. ದಕ್ಷಾಧ್ವರ, ಕಂಸವಧೆ, ಕರ್ಣಪರ್ವ ಪ್ರಸಂಗಗಳು ಇಷ್ಟದವುಗಳು. ರಸಗಳೇ ಕುಣಿವ ಸೌಂದರ್ಯ. ಈ ಪ್ರಸಂಗಗಳಿದ್ದರೆ ಪದ್ಯ ಕೇಳಲೆಂದೇ ಬರುವ ಪ್ರೇಕ್ಷಕ ವರ್ಗ. ಪದ್ಯ ಮುಗಿದಾಗ ವೇಷಧಾರಿ ಅರ್ಥ ಹೇಳಬೇಕಾಗಿಲ್ಲ. ಆ ಸನ್ನಿವೇಶವೇ ಅರ್ಥ ಹೇಳುತ್ತಿತ್ತು! “ಪುತ್ತೂರಿನ ದಭೆìಯಲ್ಲಿ ಜರುಗಿದ ದûಾಧ್ವರ ಪ್ರಸಂಗದ ಆಟದಲ್ಲಿ ನೋಟಿನ ಮಾಲೆ ಹಾಕಿದ್ದರು’ ಎನ್ನುವಾಗ ಶಾಸ್ತ್ರಿಗಳಿಗೆ ನಾಚಿಕೆ! ಆ ನಾಚಿಕೆಯ ಸೊಗಸಿನಲ್ಲಿ ಆರ್ಧ ಶತಮಾನದ ಅನುಭವ ಇಣುಕುತ್ತಿತ್ತು. ಕಾಳಿಕಾಂಬ ಕ್ಷೇತ್ರ ಮಹಾತ್ಮೆ, ಏಕವೀರಚಕ್ರ ಪ್ರಸಂಗಗಳ ರಚಯಿತರು. ಹಲವಾರು ಮಂದಿ ಶಿಷ್ಯರನ್ನು ರೂಪಿಸಿದ ಗುರು. “ನನ್ನ ಶಿಷ್ಯಂದಿರು ವಿದ್ಯಾವಂತರು. ಅವರೆಲ್ಲಾ ಪೂರ್ಣಕಾಲಿಕ ಮೇಳದ ಕಲಾವಿದರಲ್ಲ. ಹಾಗಾಗಿಯೋ ಏನೋ ನಾನು ಹೆಚ್ಚು ಪಬ್ಲಿಕ್ ಇಲ್ಲ’ ಎಂದು ನಗುತ್ತಾ, “ಕಲಾವಿದನಾಗಬೇಕಾದರೆ ಮೇಳದ ತಿರುಗಾಟ ಮಾಡಲೇ ಬೇಕು’ ಎಂದರು.
ನಾ ಕಾರಂತ ಪೆರಾಜೆ