Advertisement
ಕಾಪು: ಜರ್ಮನಿಯ ಕ್ರೈಸ್ತ ಮಿಶನರಿ ದೊರೆಗಳು 1862ರಲ್ಲಿ ಪಾದೂರಿನಲ್ಲಿ ಸ್ಥಾಪಿಸಿದ ಯುನೈಟೆಡ್ ಬಾಸೆಲ್ ಮಿಷನ್ ಚರ್ಚ್ (ಯು.ಬಿ.ಎಂ.ಸಿ) ಹಿರಿಯ ಪ್ರಾಥಮಿಕ ಶಾಲೆಯು 157 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿದ್ದು, 2012ರಲ್ಲಿ ಶತಮಾನೋತ್ತರ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡ ಸಂಭ್ರಮದಲ್ಲಿದೆ.
1862ರಲ್ಲಿ ಶಾಲೆ ಸ್ಥಾಪನೆಯಾದಾಗ 1ರಿಂದ 5ನೇ ತರಗತಿಗಳಿದ್ದವು. ಬಳಿಕ 1950ರಿಂದ 1960ರ ಅವಧಿಯಲ್ಲಿ ಆಗಿನ ಮುಖ್ಯೋಪಾಧ್ಯಾಯರಾಗಿದ್ದ ಪಾದೂರು ವಾಸು ಶೆಟ್ಟಿ ಅವರ ಪರಿಶ್ರಮದಿಂದ ಕಿರಿಯ ಪ್ರಾಥಮಿಕ ಶಾಲೆಯಿಂದ ಹಿರಿಯ ಪ್ರಾಥಮಿಕ ಶಾಲೆಯಾಗಿ ಉನ್ನತಿಗೇರಿತು. ಶಾಲೆಯಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆ, ಆಟೋಟ ಸ್ಪರ್ಧೆಗಳು, ಯೋಗ ತರಗತಿ ಮುಂತಾದ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ನಿಯಮಿತವಾಗಿ ತೊಡಗಿಸಿಕೊಳ್ಳಲು ಶಿಕ್ಷಕಿಯರು ಸತತವಾಗಿ ತರಬೇತುಗೊಳಿಸುತ್ತಿದ್ದಾರೆ. ಪಠ್ಯೇತರ ಕಾರ್ಯಕ್ರಮಗಳಲ್ಲಿ ಆಡಳಿತ ಮಂಡಳಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪಾದೂರು ರೋಟರಿ ಗ್ರಾಮೀಣ ದಳ, ಮಹಿಳಾ ಮಂಡಳಿ ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳು ಪ್ರೋತ್ಸಾಹಿಸಿ ನೆರವನ್ನು ನೀಡುತ್ತಾ ಬರುತ್ತಿದ್ದಾರೆ.
Related Articles
ಪ್ರಸ್ತುತ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ 40 ಮಂದಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಆಲ್ಫೆ†ಡ್ ಸೋನ್ಸ್, ವಾಸು ಶೆಟ್ಟಿ ಪಾದೂರು, ಐರಿಸ್ ಕುಂದರ್, ಕೃಷ್ಣಮೂರ್ತಿ ಭಟ್, ಚಂದ್ರಗುಪ್ತ ಡೇವಿಡ್, ಎಂ. ಸಿ. ಕುಂದರ್ ಮೊದಲಾದವರು ಮುಖ್ಯ ಶಿಕ್ಷಕರಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಶೈಲಿ ಪ್ರೇಮ ಕುಮಾರಿ ಅವರು ಮುಖ್ಯೋಪಾಧ್ಯಾಯಿನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Advertisement
ಹೆಮ್ಮೆಯ ಹಳೆ ವಿದ್ಯಾರ್ಥಿಗಳು ಹೇರೂರು ಅಬ್ಬೆಟ್ಟುಗುತ್ತು ಡಾ| ಎನ್.ಎಸ್ ಶೆಟ್ಟಿ (ಎಂ.ಡಿ.ಎಫ್.ಎ.ಸಿ.ಎಸ್.), ಮಂಗಳೂರು ವಿವಿಯ ಸೆನೆಟ್ ಸದಸ್ಯ ಪ್ರೊ| ಪಿ. ಶ್ರೀಪತಿ ತಂತ್ರಿ, ಮುಂಬಯಿ ಹೈಕೋರ್ಟ್ ನ ವಕೀಲರಾದ ದಿ| ಆನಂದ ವಿ. ಶೆಟ್ಟಿ, ರತ್ನಾಕರ ವಿ. ಶೆಟ್ಟಿ, ಸಂಗೀತ ವಿದ್ವಾನ್ ದಿ| ನಾರಾಯಣ ಐತಾಳ್ ಪಾದೂರು, ಡಾ| ಹರಿಪ್ರಸಾದ್ ಐತಾಳ್, ಅಮೇರಿಕಾದ ಇಂಜಿನಿಯರ್ ಅಂಡೆಮಾರುಗುತ್ತು ಮನೋಹರ್ ಶೆಟ್ಟಿ, ಸಿ.ಎ ರಾಧಾಕೃಷ್ಣ ಉಪಾಧ್ಯಾಯ ಬೆಂಗಳೂರು, ಹೊಟೇಲ್ ಉದ್ಯಮಿಗಳಾದ ಮಾಧವ ಶೆಟ್ಟಿ ಹೊಸಮನೆ, ಶಾಂತರಾಜ ಶೆಟ್ಟಿ ವಳದೂರು, ಭಾಸ್ಕರ ಶೆಟ್ಟಿ ವಳದೂರು, ಕಿರುತೆರೆ ನಟ ಕಾರ್ತಿಕ್ ಸಾಮಗ ಹೆಮ್ಮೆಯ ಹಳೆ ವಿದ್ಯಾರ್ಥಿಗಳು. ಕಳೆದ 35 ವರ್ಷಗಳಿಂದ ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದೇªನೆ. ಶಾಲೆಯನ್ನು ಉಳಿಸುವಲ್ಲಿ ಸತತ ಪರಿಶ್ರಮ ಪಡುತ್ತಿರುವ ಶಾಲಾಭಿವೃದ್ಧಿ ಸಮಿತಿ, ಶಾಲಾ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿಗಳು ಮತ್ತು ದಾನಿಗಳ ನಿರಂತರ ಸಹಕಾರ ಅವಿಸ್ಮರಣೀಯವಾದುದು.
-ಶೈಲಿ ಪ್ರೇಮಾ ಕುಮಾರಿ, ಮುಖ್ಯೋಪಾಧ್ಯಾಯಿನಿ ಯು.ಬಿ.ಯಂ.ಸಿ. ಹಿ.ಪ್ರಾ. ಶಾಲೆ, ಪಾದೂರು ನಾನು ಶತಮಾ ನೋತ್ತರ ಸುವರ್ಣ ವರ್ಷ ವನ್ನು ಪೂರೈಸಿರುವ ಈ ಶಾಲೆಯ ಹಳೇ ವಿದ್ಯಾರ್ಥಿ ಎನ್ನಲು ಹೆಮ್ಮೆಯಾಗುತ್ತಿದೆ. ಶಿಸ್ತು, ಪಠ್ಯೇತರ ಚಟುವಟಿಕೆ, ಗುಣ ಮಟ್ಟದ ಶಿಕ್ಷಣ ಶಾಲೆಯ ಉಳಿವಿಗೆ ಸಾಕ್ಷಿಯಾಗಿದೆ. ಶಾಲೆ ಯನ್ನು ಭವಿಷ್ಯಕ್ಕೂ ಉಳಿಸಿಕೊಳ್ಳಲು ಸಂಪೂರ್ಣ ಸಹಕಾರ ನೀಡುತ್ತೇವೆ.
-ಡಾ| ಎನ್.ಎಸ್. ಶೆಟ್ಟಿ ಅಬ್ಬೆಟ್ಟುಗುತ್ತು,
ಹಳೆ ವಿದ್ಯಾರ್ಥಿ -ರಾಕೇಶ್ ಕುಂಜೂರು