Advertisement

“ಕಾರ್ಯಕರ್ತರ ಶ್ರಮದಿಂದ ಪಾದುಕಾ ಪೂಜೆ ಯಶಸ್ವಿ’

08:19 PM Apr 24, 2019 | Team Udayavani |

ವಿಟ್ಲ: ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಯವರ ಮಾರ್ಗದರ್ಶನ, ದಿವ್ಯ ಉಪಸ್ಥಿತಿಯಲ್ಲಿ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ಅವರ 26ನೇ ಸನ್ಯಾಸಗ್ರಹಣ ದಿನದ ಪ್ರಯುಕ್ತ ಜೀವನದಾನ, 26ನೇ ಯೋಗಪಟ್ಟಾಭಿಷೇಕ ದಿನದ ಪ್ರಯುಕ್ತ ನಡೆದ ಮಹಾಪಾದುಕಾ ಪೂಜೆ ಯಶಸ್ವಿಯಾಗಿ ನಡೆದಿದ್ದು, ಈ ಯಶಸ್ಸು ಕಾರ್ಯಕರ್ತರದ್ದು. ತನು, ಮನ, ಧನಗಳ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಯೋಗಪಟ್ಟಾಭಿಷೇಕ ಆಯೋಜನ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್‌ ಶ್ಲಾಘಿಸಿದರು.

Advertisement

ಅವರು ರವಿವಾರ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಜನಭವನ ದಲ್ಲಿ ನಡೆದ ಕಾರ್ಯಕರ್ತರ ಅಭಿನಂದನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಿತಿ ಕೋಶಾಧಿಕಾರಿ ಬಂಗಾರಡ್ಕ ಜನಾರ್ದನ ಭಟ್‌ ಲೆಕ್ಕಪತ್ರ ಮಂಡಿಸಿ, ಒಟ್ಟು ಲೆಕ್ಕಾಚಾರದಲ್ಲಿ ಮೊತ್ತ ಉಳಿತಾಯವಾಗಿದೆ. ಅಂದಾಜು ಲೆಕ್ಕಪತ್ರ ಮಂಡಿಸಲಾಗುತ್ತಿದ್ದು, ಸಂಪೂರ್ಣ ವಿವರವನ್ನು ಶೀಘ್ರದಲ್ಲಿ ನೀಡ ಲಾಗುವುದು ಎಂದರು.

ಪ್ರಧಾನ ಕಾರ್ಯದರ್ಶಿ ಸೇರಾಜೆ ಸುಬ್ರಹ್ಮಣ್ಯ ಭಟ್‌ ಮಾತನಾಡಿ, ಕಾರ್ಯ ಕ್ರಮ ಯಶಸ್ಸಿನಲ್ಲಿ ಪ್ರತಿಯೊಂದು ವಿಭಾಗ ದವರ ಶ್ರಮವಿದೆ. ಶ್ರೀ ಗುರುಗಳು ನುಡಿದಂತೆ ಇದು ಮಠಗಳ ಇತಿಹಾಸದಲ್ಲಿ ದಾಖಲೆಯಾಗಿದೆ ಎಂದರು. ಮುಳ್ಳೇರಿಯ ಮಂಡಲ ಅಧ್ಯಕ್ಷ ಪ್ರೊ| ಟಿ. ಶ್ರೀಕೃಷ್ಣ ಭಟ್‌, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಅಶೋಕ್‌ ಕೆದ್ಲ, ಮೆನೇಜರ್‌ ಶಿವಪ್ರಸಾದ್‌ ಉಪಸ್ಥಿತರಿದ್ದರು. ವಿವಿಧ ಕಾರ್ಯಕರ್ತರು ಅನಿಸಿಕೆ ವ್ಯಕ್ತಪಡಿಸಿದರು. ಇದೇ ಸಂದರ್ಭ ಶ್ರೀಮಠದ ಮೆನೇಜರ್‌ ಶಿವಪ್ರಸಾದ್‌ ಮತ್ತು ಪ್ರಸನ್ನ ಅವರಿಗೆ ವಿಶೇಷ ನಗದು ನೀಡಿ ಪುರಸ್ಕರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next